ನಾಳೆ ನಾಡಿದ್ದು ಪರೀಕ್ಷೆ ಗಳು ಮುಂದೂಡಿಕೆ – ಧಾರವಾಡ ಕವಿವಿ ಪ್ರಕಟಣೆ…..

Suddi Sante Desk

ಧಾರವಾಡ –

ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಏಪ್ರಿಲ್ 11 ರ ನಾಳೆ ಮತ್ತು ನಾಡಿದ್ದು ನಡೆಯಬೇಕಿ ದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಪರೀಕ್ಷೆ ಮತ್ತು ನಾಡಿದ್ದು ನಡೆಯಬೇಕಾಗಿದ್ದ ಸ್ನಾತಕೋತ್ತರ ಕೋರ್ಸ್‌ ಗಳ ಪರೀಕ್ಷೆ ಯನ್ನು ಮುಂದೂಡಲಾಗಿದೆ.

ಹೌದು ಏಪ್ರಿಲ್ 11 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಪರೀಕ್ಷೆ ನಡೆಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ಈ ಒಂದು ಕಾರಣಾಂತರಗಳಿಂದ ಕೆಸೆಟ್ ಪರೀಕ್ಷೆ ಯನ್ನು ಮತ್ತು ನಾಡಿದ್ದು ಅಂದರೆ ಸೋಮವಾರ ಇದ್ದ ಪರೀಕ್ಷೆ ಯನ್ನು ಮುಂದೂಡಲಾಗಿದೆ‌‌

ಮುಂದಿನ ಕೆಸೆಟ್ ಪರೀಕ್ಷಾ ದಿನಾಂಕವನ್ನು ಮತ್ತು ಎಲ್ಲಾ ಸ್ನಾತಕೋತ್ತರ ಪರೀಕ್ಷಾ ದಿನಾಂಕವನ್ನು ಪ್ರಕ ಟಿಸಲಾಗುವುದು ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೋ ರವೀಂದ್ರನಾಥ ಕದಮ್ ಸುತ್ತೋಲೆಹೊರಡಿಸಿದ್ದಾರೆ‌‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.