ಬೆಳಗಾವಿ –
ದೇಶದಲ್ಲಿ ಈವರೆಗೆ ಯಾರು ನೀಡದಷ್ಟು ಹೆದ್ದಾರಿ ಅಭಿವೃದ್ಧಿ ಗೆ ಅನುದಾನವನ್ನ ಸಧ್ಯ ನಿತಿನ್ ಗಡ್ಕರಿ ಅವರು ನೀಡಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು ಬೆಳಗಾವಿ ಯಲ್ಲಿ ಮಾತನಾಡಿದ ಅವರು ನಿತಿನ್ ಗಡ್ಕರಿ ಕಾರ್ಯವೈಖರಿ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಸಣ್ಣ ಕಾಲ ಘಟ್ಟದಲ್ಲಿ ಅಭಿವೃದ್ಧಿ ಆಗಿವೆ ಅದು ಪ್ರಧಾನಮಂತ್ರಿ ನರೇಂದ್ರ ಮೋದಿ,ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಆಗಿದೆ ಎಂದರು ಅಲ್ಲದೇ ಈವರೆಗೆ ದೇಶದಲ್ಲಿ ಯಾರು ನೀಡದಷ್ಟು ಹೆದ್ದಾರಿ ಅಭಿವೃದ್ಧಿ ಗೆ ಅನುದಾನವನ್ನ ಗಡ್ಕರಿ ಅವರು ನೀಡಿದ್ದಾರೆ.ಕೇಂದ್ರ ಸಚಿವ ಗಡ್ಕರಿ ಅವರಿಗೆ ನಾವು ಎದ್ದು ನಿಂತು ಧನ್ಯವಾದ ಅರ್ಪಿಸಬೇಕೆಂದರು.ಅಮೆರಿಕ ದೇಶ ಶ್ರೀಮಂತ ಇರುವುದಕ್ಕೆ ಅಲ್ಲಿ ರಸ್ತೆಗಳು ಕಾರಣ ಹಾಗೆಯೇ ದೇಶದ ರಸ್ತೆಗಳನ್ನು ನಿತಿನ್ ಗಡ್ಕರಿ ಅವರು ಅಭಿವೃದ್ಧಿ ಮಾಡುತ್ತಿದ್ದಾರೆಂದರು.
ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನ ಪರಿವರ್ತನೆ ಮಾಡುವ ಕೆಲಸವನ್ನ ಕೂಡಾ ಮಾಡಿದ್ದಾರೆ.70 ವರ್ಷದಲ್ಲಿ 91 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿದೆ.ಅದೇ ನರೇಂದ್ರ ಮೋದಿ ಮತ್ತು ನಿತಿನ್ ಗಡ್ಕರಿ ನೇತೃತ್ವದಲ್ಲಿ ಈವರೆಗೂ 1 ಲಕ್ಷಕ್ಕೂ ಅಧಿಕ ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡಿದ್ದೇವೆಂದರು


ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ 8 ಸಾವಿರ ಕೋಟಿ ಕೊಟ್ಟಿ ದ್ದರು.ಇಂದು ಮೋದಿ ಸರ್ಕಾರ 40 ಸಾವಿರಕ್ಕೂ ಅಧಿಕ ಕೋಟಿ ಅನುದಾನವನ್ನ ಕೊಟ್ಟಿದ್ದಾರೆ.ಲೋಕಸಭೆ ಯಲ್ಲಿ ಯಾವುದೇ ಒಬ್ಬ ಎಂಪಿ ಸಹ ಗಡ್ಕರಿ ಅವರಿಗೆ ನೀವು ಅನುದಾನ ಕೊಟ್ಟಿಲ್ಲ ಅಂತಾ ಹೇಳಿಲ್ಲ.ಗಡ್ಕರಿ ಅವರಿಗೆ ಗಡ್ಕರಿಯಲ್ಲ ರೋಡಕರಿ ಅಂತಾ ಕರೆಯುತ್ತಾರೆ ಎಂದ ಪ್ರಹ್ಲಾದ ಜೋಶಿ ಯವರು.