ಹುಬ್ಬಳ್ಳಿ –
ಧರ್ಮಸ್ಥಳ ಪ್ರಕರಣ ದಲ್ಲಿ ಎಸ್ ಐ ಟಿ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿ ಎಂದು ಸ್ಲಂ ಬೋರ್ಡ್ ಅಧ್ಯಕ್ಷರು ಹಾಗೂ ಶಾಸಕ ರಾದ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ ಪತ್ತಿಕಾ ಪ್ರಕಟಣೆ ಯ ಮೂಲಕ ಹೇಳಿಕೆ ನೀಡಿರುವ ಅವರು ವೀರೇಂದ್ರ ಹೆಗಡೆಯವರು ಖುದ್ದು ಎಸ್ ಐ ಟಿ ತನಿಖೆಯನ್ನು ಸ್ವಾಗತ ಮಾಡಿದ್ದಾರೆ ಆದರೆ ಬಿಜೆಪಿ ಯಾಕೆ ಇದರಿಂದ ವಿಚಲಿತ ವಾಗಿದೆ ತಿಳಿಯುತ್ತಿಲ್ಲ .
ಮೊದಲು ಬಿಜೆಪಿ ಎಸ್ ಐ ಟಿ ಸ್ವಾಗತ ಮಾಡಿ ಈಗ ವರಸೆ ಬದಲಾಯಿಸಿದ್ದಾರೆ ಎಂದು ಸ್ಲಂ ಬೋರ್ಡ್ ಅಧ್ಯಕ್ಷರು ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಕಿಡಿ ಕಾರಿದ್ದಾರೆ. ಬಿಜೆಪಿ ಈ ಪ್ರಕರಣವನ್ನು ರಾಜಕೀಯ ಗೊಳಿಸುತ್ತಿದೆ. ಎಸ್ಐಟಿ ರಚನೆಯಿಂದ ಸತ್ಯ ಹೊರಬರಲಿದೆ ಇದಕ್ಕೆ ಯಾರು ಭಯಪಡುವ ಅವಶ್ಯಕತೆ ಇಲ್ಲ ಎಸ್ಐಟಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳು ಇದ್ದಾರೆ ಅದು ಬಿಜೆಪಿ ಅವರಿಗೂ ಗೊತ್ತಿದೆ. ಇವರು ಸೌಜನ್ಯ ಪರ ಹೌದೋ ಅಲ್ಲ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಶಾಸಕರು ಹೇಳಿದ್ದಾರೆ.
ಬಿಜೆಪಿಯವರು ಪ್ರಕರಣಗಳನ್ನು ಸಿಬಿಐಗೆ ಕೊಡಿ ಎಂದು ಹೇಳುತ್ತಾರೆ. ಸಿಬಿಐ ಯಾರ ಅಡಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದಾಗ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ನೀಡಿಲ್ಲ ಈಗ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆ ಇಡೀ ದೇಶದಲ್ಲಿಯೇ ಅತ್ಯುತ್ತಮವಾಗಿದೆ ಎಂದು ಹೇಳಿದರು.
ಬಿಜೆಪಿ ಅವರ ನಾಟಕ ನಮ್ಮ ರಾಜ್ಯದ ಬುದ್ಧಿವಂತ ಜನರಿಗೆ ಗೊತ್ತಿದೆ. ಇನ್ನಾದರೂ ಬಿಜೆಪಿಯವರು ದೆಹಲಿಗೂ ಪಾದಯಾತ್ರೆ ಮಾಡಬೇಕು. ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಸಾಕಷ್ಟು ಮೋಸ ಆಗುತ್ತಿದೆ. ಬರುವಂತ ಜಿ ಎಸ್ ಟಿ ಹಾಗೂ ತೆರಿಗೆ ಹಣ ನಮ್ಮ ಪಾಲಿನ ಅನುದಾನ ಕೊಡುತ್ತಿಲ್ಲ.
ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಯೋಜನೆಗಳಿಗೆ ಬರುವಂತಹ ಅನುದಾನ ಕೂಡ ಸಾಕಷ್ಟು ವಿಳಂಬ ಮಾಡಿ ಕೊಡಲಾಗುತ್ತಿದೆ. ಇದರ ಬಗ್ಗೆ ಬಿಜೆಪಿ ತುಟಿ ಪಿಟಿಕ್ ಅನ್ನುತ್ತಿಲ್ಲ ಕೇಂದ್ರದ ವಿರುದ್ಧ ರಾಜ್ಯದ ಬಿಜೆಪಿ ನಾಯಕರುಗಳು ಹೋರಾಟ ಮಾಡಲಿ ಅನುದಾನ ಕೊಡಿಸಲು ಪ್ರಯತ್ನಿಸಲಿ ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಲಿ ಅದು ಬಿಟ್ಟು ಅರ್ಥವಿಲ್ಲದ ವಿವಾದಗಳನ್ನು ಬರೀ ರಾಜಕೀಯ ಗೊಳಿಸುವುದು ಇವರ ಕಾಯಕವಾಗಿದೆ ಎಂದು ಜರಿದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..