ಹುಬ್ಬಳ್ಳಿ –
ರಕ್ತದಾನದೊಂದಿಗೆ ಶಾಸಕ ಮಹೇಶ್ ತೆಂಗಿನಕಾಯಿಯವರ ಹುಟ್ಟು ಹಬ್ಬ ಆಚರಣೆ – ಪೂರ್ವ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದ ನೇತ್ರತ್ವದಲ್ಲಿ ಶಶಿಕಾಂತ ಬೀಜವಾಡ,ಅಣ್ಣಪ್ಪ ಗೋಕಾಕ ಮತ್ತು ಟೀಮ್ ನಿಂದ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿಕೆ…..
ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿಯವರ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯಲ್ಲಿ ಅರ್ಥಪೂರ್ಣ ವಾಗಿ ಆಚರಣೆ ಮಾಡಲಾಯಿತು.ಹುಟ್ಟು ಹಬ್ಬದ ಹಿನ್ನಲೆಯಲ್ಲಿ ನಗರದಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಇನ್ನೂ ನಗರದ ಖಾಸಗಿ ಹೊಟೇಲ್ ನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಈ ಒಂದು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನವನ್ನು ಮಾಡಿ ನೆಚ್ಚಿನ ಶಾಸಕರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.ಇನ್ನೂ ಇದೇ ವೇಳೆ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರು ಶಾಸಕರಿಗೆ ಹುಟ್ಟು ಹಬ್ಬದ ಶುಭಾಶಯ ಗಳನ್ನು ಕೋರಿದರು.
ಶಿಬಿರದಲ್ಲಿ ಪಾಲ್ಗೊಂಡ ಪ್ರಭು ನವಲಗುಂದಮಠ ನೇತ್ರತ್ವದಲ್ಲಿ ಅಣ್ಣಪ್ಪ ಗೋಕಾಕ,ಶಶಿಕಾಂತ ಬಿಜವಾಡ ನೇತ್ರತ್ವದಲ್ಲಿ ಟೀಮ್ ಶಾಸಕರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲಾ ಯಿತು.ಶಾಸಕರಿಗೆ ಪ್ರೀತಿಯಿಂದ ಸನ್ಮಾನ ಮಾಡಿ ಗೌರವಿಸಿ ವಿಶ್ವಗುರು ಬಸವಣ್ಣನವರ ಪ್ರತಿಮೆ ಯನ್ನು ನೀಡಿ ಶುಭವನ್ನು ಹಾರೈಸಲಾಯಿತು.
ಈ ಒಂದು ಸಂದರ್ಭದಲ್ಲಿ ಪ್ರಭು ನವಲಗುಂದ ಮಠ,ರಾಜು ಜರತಾಗರ,ಶಶಿಕಾಂತ ಬೀಜವಾಡ, ಅಣ್ಣಪ್ಪ ಗೋಕಾಕ ರವೀಂದ್ರ ಬಸವರಾಜ ಇಚ್ಚಂಗಿ,ಮಂಜು ಬೀಜವಾಡ,ಅರುಣ ಉಗರ ಗೋಳ,ದೀಪಕ ಮೆಹರವಾಡೆ,ನಾಗರಾಜ ಅಂಬಿಗೇರ ರಂಗಾಬದ್ದಿ ಅಶೋಕ ವಾಲ್ಮೀಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದರೊಂದಿಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ರುವ ಶಾಸಕರಿಗೆ ಶುಭವನ್ನು ಕೋರಿ ಅರ್ಥ ಪೂರ್ಣವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದು ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..