ಬೆಂಗಳೂರು –
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ,ಬೆಳೆಸಲು ಕನ್ನಡ ಮಾಧ್ಯಮದ ಜೊತೆಗೆ ಉದ್ದೇಶಿತ ಸರ್ಕಾರಿ ಮಾದರಿ ಶಾಲೆ ಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ಸ್ಪೋಕನ್ ಇಂಗ್ಲೀಷ್ ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರಸಕ್ತ ವರ್ಷದಿಂದಲೇ ರಾಜ್ಯದ ಶಾಲಾ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸಲು ತಯಾರಿ ಮಾಡಲಾಗುತ್ತಿದೆ.ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂವಹನ ಹಾಗೂ ಶಿಕ್ಷಣ ಪಡೆಯುವ ಉದ್ದೇಶದಿಂದ ಪ್ರಸಕ್ತ ವರ್ಷ ದಿಂದಲೇ ಇಂಗ್ಲೀಷ್ ಸ್ಪೋಕನ್ ಕ್ಲಾಸ್ ಶುರು ಮಾಡಲು ಮುಂದಾಗಿದೆ.ಸರ್ಕಾರಿ ಶಾಲೆಗಳಲ್ಲಿರುವ ಇಂಗ್ಲೀಷ್ ಶಿಕ್ಷಕ ರಿಗೆ ಈ ಬಗ್ಗೆ ವಿಶೇಷ ತರಬೇತಿ ಹಾಗೂ ಕೌಶಲ್ಯ ಹೆಚ್ಚಿಸಲು ಸಿದ್ಧತೆ ಮಾಡಲಾಗುತ್ತಿದೆ.
ಖಾಸಗಿ ಶಾಲೆಗಳು ಮತ್ತು ಇಂಗ್ಲೀಷ್ ಮಾಧ್ಯಮ ಶಿಕ್ಷಣದ ವ್ಯಾಮೋಹ ಬಹಳಷ್ಟು ಜನರಲ್ಲಿದೆ.ಗುಣಮಟ್ಟ ಹೇಗಾ ದರೂ ಇರಲಿ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕು ಎನ್ನುವ ಆಸೆ ಪಾಲಕರಲ್ಲಿ ಇದೆ. ರಾಜ್ಯದಲ್ಲಿನ ಕೆಪಿಎಸ್ ಶಾಲೆ ಗಳಲ್ಲೂ ಕೂಡ ಇಂಗ್ಲೀಷ್ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಲು ಪಾಲಕರು ಆಸಕ್ತಿ ತೋರಿಸುತ್ತಿದ್ದಾರೆ.ಹೀಗಾಗಿ ಮಾದರಿ ಶಾಲೆಗಳಲ್ಲಿ ಇಂಗ್ಲೀಷ್ ನ್ನು ಸ್ಪೋಕನ್ ಇಂಗ್ಲೀಷ್ ಆಗಿ ಕಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ವರದಿ – ಚಕ್ರವರ್ತಿ ಜೊತೆ ಅರುಣಾ ಸುದ್ದಿ ಸಂತೆ ಬೆಂಗಳೂರು