ಧಾರವಾಡ –
ಧಾರವಾಡದ ಹೊರವಲಯದ ಇಟಿಗಟ್ಟಿ ಯರಿಕೊಪ್ಪ ಬಳಿ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ವಿಚಾರ ಕುರಿತಂತೆ ದೇಶದ ಪ್ರಧಾನಿ ನರೇಂದ್ರ ಮೊದಿ ಸ್ಪಂದಿಸಿದ್ದಾರೆ.

ಇಟಿಗಟ್ಟಿ ಬಳಿ ಹೆದ್ದಾರಿಯಲ್ಲಿ ನಡೆದ ಈ ಒಂದು ಅಪಘಾತದ ಕುರಿತಂತೆ ಪ್ರಧಾನಿ ನರೇಂದ್ರ ಮೊದಿ ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದವರ ಬಗ್ಗೆ ಸಂತಾಪ ಸೂಚಿಸುವೆ ಈ ಸಂದರ್ಭದಲ್ಲಿ ದುಖಃತಪ್ತ ಕುಟುಂಬಗಳ ನೋವಿನಲ್ಲಿ ನಾನು ಭಾಗಿ ಎನ್ನುತ್ತಾ ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ಟ್ವಿಟ್ ಮಾಡಿದ್ದಾರೆ.

ಇನ್ನೂ ಅಪಘಾತಕ್ಕೆ ಸ್ಪಂದಿಸಿದ್ದು ಸರಿ ಆದರೆ ಮುಖ್ಯವಾಗಿ ಹುಬ್ಬಳ್ಳಿ ಧಾರವಾಡ ಮಧ್ಯದ ಪೂನಾ ಬೆಂಗಳೂರು ಹೆದ್ದಾರಿಯ ಈ ಒಂದು ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಮಾಡಿ ಮಾಡಿ ಎಂದು ಹುಬ್ಬಳ್ಳಿ ಧಾರವಾಡ ಜನತೆ ಒತ್ತಾಯವನ್ನು ಮಾಡತಾ ಇದ್ದಾರೆ.

ಒಂದು ಮುಖ ರಸ್ತೆಯಾಗಿದ್ದು ಇದರಿಂದ ಅಪಘಾತಗಳು ಹೆಚ್ಚುತ್ತಿವೆ . ಇನ್ನಾದರೂ ಪ್ರಧಾನಿಯವರು ಇದನ್ನು ಗಂಭೀರವಾಗಿ ತಗೆದುಕೊಂಡು ರಸ್ತೆಯನ್ನು ವಿಸ್ತರಣೆ ಕ್ರಮಕೈಗೊಳ್ಳುತ್ತಾರೆನಾ ಎಂಬುದನ್ನು ಕಾದು ನೋಡಬೇಕು.