ಹುಬ್ಬಳ್ಳಿ –
ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಎನ್.ಹೆಚ್. ಕೋನ ರಡ್ಡಿ ಅವರು ಪ್ರಚಾರ ನಡೆಸಿದರು.

.
ತಾಲ್ಲೂಕಿನ ಬಿಡ್ನಾಳದ ಆರ್.ಕೆ ಪಾಟೀಲ ಶಾಲೆಯಲ್ಲಿ ಮತಯಾಚಿಸಿ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ನಾಲ್ಕು ದಶಕಗಳಿಂದ ಗುರಿಕಾರ ಅವರು ಶಿಕ್ಷಕರ ಸಮಸ್ಯೆ ನಿವಾರಣೆಗೆ ಹಲವಾರು ಹೋರಾಟಗಳನ್ನು ನಡೆಸಿ ದ್ದಾರೆ.ಶಿಕ್ಷಕರು ಪ್ರಥಮ ಪ್ರಾಶ್ಯಸ್ತದ ಮತವನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಮೋಹನ ಅಸುಂಡಿ,ವೀರಭದ್ರಪ್ಪ ಮೇಟಿ, ವೀರೇಶ ಉಪ್ಪಿನ, ಶರೀಫ್ ನದಾಫ್, ಮಂಜುನಾಥ ಅಡವಿ ಇದ್ದರು.


ಇನ್ನೂ ಇತ್ತ ಮಾಜಿ ಶಾಸಕ ಕೋನರಡ್ಡಿ ಅವರಹ ಕೂಡಾ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದರು ಬಸವರಾಜ ಗುರಿಕಾರ ಪರ ಕಾಂಗ್ರೆಸ್ ಮುಖಂಡ ಎನ್.ಹೆಚ್. ಕೋನ ರಡ್ಡಿ ಅವರು ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ, ಇಂಗಳಹ ಳ್ಳಿಯ ಶಾಲಾ-ಕಾಲೇಜುಗಳಿಗೆ ತೆರಳಿ ಮತಯಾಚಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದ ರ್ಭದಲ್ಲಿ ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.ಹಾಗಾಗಿ, ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ ಅವರಿಗೆ ಮತ ನೀಡಿ ಎಂದು ವಿನಂತಿ ಮಾಡಿಕೊಂಡರು.



ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ ಕುಮಾರ ಪಾಟೀಲ,ವಿನೋದ ಅಸೂಟಿ, ಶಿವಾನಂದ ಕರಿಗಾರ,ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಥ ಮಾಯಣ್ಣವರ, ಶಿವಣ್ಣ ಹುಬ್ಬಳ್ಳಿ, ತಾಜುದ್ದೀನ್ ಕಾಗದ, ಬಸವರಾಜ ಬೀರಣ್ಣವರ, ಮೌಲಾಸಾಬ ಹೂಲಿ, ಕುರಿ ನಲವಡಿ ಇದ್ದರು.