ಹೃದಯಾಘಾತದಿಂದ ಪ್ರಾಧ್ಯಾಪಕ ಸಾವು – ಎದೆನೋವಿನೊಂದಿಗೆ ಕಾಣಿಸಿಕೊಂಡ ಉಸಿರಾಟದ ಸಮಸ್ಯೆ ಪ್ರಾಧ್ಯಾಪಕ ಮಹೇಶ್ ನಿಧನಕ್ಕೆ ನಾಡಿನಾದ್ಯಾಂತ ಸಂತಾಪ

Suddi Sante Desk
ಹೃದಯಾಘಾತದಿಂದ ಪ್ರಾಧ್ಯಾಪಕ ಸಾವು  – ಎದೆನೋವಿನೊಂದಿಗೆ ಕಾಣಿಸಿಕೊಂಡ ಉಸಿರಾಟದ ಸಮಸ್ಯೆ ಪ್ರಾಧ್ಯಾಪಕ ಮಹೇಶ್ ನಿಧನಕ್ಕೆ ನಾಡಿನಾದ್ಯಾಂತ ಸಂತಾಪ

ದಕ್ಷಿಣ ಕನ್ನಡ

ಹೃದಯಾಘಾತದಿಂದ ಪ್ರಾಧ್ಯಾಪಕರೊಬ್ಬರು ಸಾವಿಗೀಡಾದ ಘಟನೆ ದಕ್ಷಿಣಕನ್ನಡದಲ್ಲಿ ಕಂಡು ಬಂದಿದೆ.ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂ ಪಾಡಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಮಹೇಶ್ (48) ಸಾವಿಗೀಡಾದವರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು ಪುತ್ತೂರಿನ ಪರ್ಲಡ್ಕ ನಿವಾಸಿಯಾಗಿರುವ ಮಹೇಶ್ಗೆ ಬೆಳಗಿನ ಜಾವ 3.30ರ ಸುಮಾರಿಗೆ ಎದೆನೋವು ಕಾಣಿಸಿಕೊಂಡಿತು.ಬಳಿಕ ಉಸಿ ರಾಡುವುದು ಕೂಡಾ ಕಷ್ಟವಾಯಿತು ಇದನ್ನು ಅರಿತ ಕೂಡಲೇ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು

ಆದರೆ ಮಾರ್ಗಮಧ್ಯೆಯೇ ಅವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.ರಾತ್ರಿ ಮಲಗು ವಾಗ ಆರೋಗ್ಯವಾಗಿದ್ದ ಇವರು ಬೆಳಗಿನ ಜಾವ ಇದ್ದಕ್ಕಿದ್ದಂತೆ ಅನಾರೋಗ್ಯಗೊಂಡು ಹೃದಯಾ ಘಾತಕ್ಕೆ ಒಳಗಾಗಿ ಸಾವಿಗೀಡಾಗಿರುವುದು ಅಚ್ಚರಿ ಹಾಗೂ ಆತಂಕವನ್ನು ಮೂಡಿಸಿದ್ದು ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ದಕ್ಷಿಣ ಕನ್ನಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.