ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ – ಬೆಂಗಳೂರು ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವಿಜಯಪುರದ ಮಾಜಿ ಪಾಲಿಕೆಯ ಸದಸ್ಯರು
ನವದೆಹಲಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ವಿಚಾರ ಕುರಿತಂತೆ ಸಮಯವನ್ನು ನಿಗದಿ ಚುನಾವಣೆಯನ್ನು ಮಾಡಿ ಎಂದು ಹೇಳಿ ಆದೇಶ ಹೊರಡಿಸಿದ್ದ ಬೆಂಗಳೂರಿನ ನ್ಯಾಯಾಲ ಯದ ಆದೇಶಕ್ಕೆ ಸರ್ವೊಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ನ್ಯಾಯಾಲಯದ ಆದೇಶದಿಂದ ನಮಗೆ ಅನ್ಯಾಯವಾಗುತ್ತದೆ ಎಂದು ಮತ್ತು ಇದನ್ನು ಪ್ರಶ್ನಿಸಿ ವಿಜಯಪುರದ ಮಾಜಿ ಮಹಾನಗರ ಪಾಲಿಕೆಯ ಸದಸ್ಯರು ಮತ್ತು ಕೆಲವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೆರಿದ್ದರು. ಈ ಕುರಿತಂತೆ ವಿಚಾರಣೆ ಮಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಚುನಾವಣೆ ಪ್ರಕ್ರಿಯೆಗೆ ಸಂಪೂರ್ಣವಾಗಿ ತಡೆಯಾಜ್ಞೆ ನೀಡಿದ್ದಾರೆ.
ಈ ಹಿಂದೆ ಮಹಾನಗರ ಪಾಲಿಕೆಯ ಚುನಾವಣೆ ವಿಳಂಬ ಕುರಿತು ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ಮುಖಂಡ ನಾಗರಾಜ ಗೌರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ್ದ ಬೆಂಗಳೂರಿನ ನ್ಯಾಯಾಲಯ ಕೊನೆಗೂ ಚುನಾವಣೆ ಪ್ರಕ್ರಿಯೆಗಳನ್ನು ಮೊದಲು ಮಾಡಿಕೊಂಡು ನಂತರ ಚುನಾವಣೆ ಮಾಡುವಂತೆ ಆದೇಶ ನೀಡಿತ್ತು ಇದರ ಬೆನ್ನಲ್ಲೇ ಇಂದು ಸರ್ವೊಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಇನ್ನೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಮತ್ತಷ್ಟು ವಿಳಂಬವಾಗಲಿದ್ದು ಚುನಾವಣೆ ಆಗುತ್ತದೆ ಎಂದು ಕೊಂಡಿದ್ದವರಿಗೆ ದೊಡ್ಡ ಶಾಕ್ ನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ.