ಧಾರವಾಡ –
ಫೆ. 14 ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಅದನ್ನು ಆಚರಣೆ ಮಾಡೊ ಬದಲಿಗೆ ಮಾತಾ ಪಿತಾ ಪೂಜೆ ಮಾಡೋಣ ಎಂದು ಶ್ರೀರಾಮ ಸೇನಾ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ ಹೇಳಿದ್ದಾರೆ. ವಿಡಿಯೋ ಸಂದೇಶದ ಮೂಲಕ ಯುವ ಜನರಿಗೆ ಕರೆ ಕೊಟ್ಟಿದ್ದಾರೆ.

ವಿಡಿಯೋ ಮಾಡಿ ಹರಿಬಿಟ್ಟ ಪ್ರಮೋದ ಮುತಾಲಿಕ ಅವರು ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ದೇಶದಲ್ಲಿ ಶೆ. 40 ರಷ್ಟು ಯುವಶಕ್ತಿ ಇದೆ ಅದು ನಮ್ಮ ದೇಶದ ತಾಕತ್ತು ಈ ಶಕ್ತಿಯನ್ನು ನಿಷ್ಕ್ರಿಯ ಮಾಡುವ ಕುತಂತ್ರ ನಡೆದಿದೆ ಎಂದರು.ಆ ಮೂಲಕ ದೇಶವನ್ನು ದುರ್ಬಲ ಮಾಡೋ ಯತ್ನ ಇದೆ ಇದರ ಹಿಂದೆ ವಿದೇಶಿ ಶಕ್ತಿ ಕೈವಾಡ ಇದೆ ಎಂದರು.
ಇನ್ನೂ ನಾನಾ ‘ಡೇ’ಗಳ ಮೂಲಕ ಯುವಶಕ್ತಿ ಹಾಳು ಮಾಡೋ ಷಡ್ಯಂತ್ರ ಇದಾಗಿದ್ದು ಸರಕಾರ ವ್ಯಾಲೆಂಟೈನ್ಸ್ ಡೇ ನಿರ್ಬಂಧಿಸಬೇಕು ಇದರ ಹಿಂದೆ ಸೆಕ್ಸ್, ಡ್ರಗ್ಸ್ ಮಾಫಿಯಾ ಇದೆ ಎಂದಿದ್ದಾರೆ.

ನಮ್ಮ ಸಂಪ್ರದಾಯವನ್ನು ಹಾಳು ಮಾಡೋ ಸಂಚಿದೆ ಈ ಒಂದು ಆಚರಣೆ ಬದಲಿಗೆ ಎಲ್ಲರೂ ಮಾತಾ-ಪಿತಾ ಪೂಜೆ ಮಾಡೋಣ ಎಂದು ಕರೆ ನೀಡಿದರು.






















