ಧಾರವಾಡ –
KAS ನಿಂದ IAS ಗೆ ಬಡ್ತಿ ಹೊಂದಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ ಅವರನ್ನು ಧಾರವಾಡದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಧಾರವಾಡದ ನಾಗರಿಕರ ವತಿಯಿಂದ ಪಾಲಿಕೆಯ ಆಯುಕ್ತರಿಗೆ ಆತ್ಮೀಯವಾಗಿ ಸನ್ಮಾನಿಸಿ ನಂತರ ಅಭಿನಂದಿಸಿ ಶುಭಾಶಯಗಳು ಕೋರಲಾಯಿತು.
ಈರೇಶ ಅಂಚಟಗೇರಿ ನೇತ್ರತ್ವದಲ್ಲಿ ಈ ಒಂದು ಕಾರ್ಯಕ್ರಮ ನಡೆಯಿತು.

ಈರಣ್ಣ ಹಪ್ಪಳಿ ,ಸುನೀಲ ಮೋರೆ ,ಶ್ರೀನಿವಾಸ ಕೋಟ್ಯಾನ, ಮಂಜುನಾಥ ನೀರಲಕಟ್ಟಿ ,ಹಾಶಮ ಮಿರಜಕರ ,ಬಸು ಬಾಳಗಿ, ಶಕ್ತಿ ಹಿರೇಮಠ ,ಜಗ್ಗು ಚಿಕ್ಕಮಠ ,ಶಂಕರ ಶೇಳಕೆ ,ನಿಂಗಪ್ಪ ಸಪ್ಪೂರಿ ಹಾಗು ಪ್ರಮುಖರು ಉಪಸ್ಥಿತರಿದ್ದರು

ಇನ್ನೂ ಜಯ ಕರ್ನಾಟಕ ಸಂಘಟನೆಯಿಂದಲೂ ಸನ್ಮಾನವನ್ನು ಮಾಡಲಾಯಿತು.ಸುಧೀರ್ ಮುಧೋಳ ನೇತೃತ್ವದಲ್ಲಿ ಬಡ್ತಿ ಪಡೆದ ಆಯುಕ್ತರಿಗೆ ಸನ್ಮಾನ ಮಾಡಲಾಯಿತು. ಜಿಲಾನಿ ಖಾಜಿ,ಲಕ್ಷ್ಮಣ ದೊಡಮನಿ,ಅಲ್ತಾಫ್ ಜಾಲಿಗಾರ, ಕರಿಯಪ್ಪ, ಮಂಜುನಾಥ ಸುತಗಟ್ಟಿ,ಕಿರಣ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
