ಮಂಗಳೂರು –
ಪಂಚಕರ್ಮ ಮಸಾಜ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವೊಂದು ಮಂಗಳೂರಿನ ಕಡಬ ದಲ್ಲಿ ಪತ್ತೆಯಾಗಿದೆ.ಹೌದು ಸ್ನೇಹಾ ಆಯು ರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿ ನಲ್ಲಿ ಇಲ್ಲಿನ ಕಳಾರ ಸಮೀಪ ಕಾರ್ಯಾ ಮಾಡುತ್ತಿದ್ದ ಮಸಾಜ್ ಪಾರ್ಲರ್ ನಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಬಗ್ಗೆ ಇದೀಗ ಆರೋಪ ಕೇಳಿ ಬಂದ ಮೇಲೆ ದಾಳಿ ಮಾಡಿದ ಪೊಲೀಸರು ಜಾಲ ವನ್ನು ಪತ್ತೆ ಮಾಡಿದ್ದಾರೆ.
ಸ್ಥಳಕ್ಕೆ ತೆರಳಿದ ಕಡಬ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತ ರನ್ನು ಕೇರಳ ಮೂಲದ 25 ವರ್ಷದ ಯುವತಿ ಪಾರ್ಲರ್ ಮಾಲಕ ಅಬ್ರಹಾಂ ಹಾಗೂ ಅನೀಶ್ ಎಂದು ಗುರುತಿಸಲಾಗಿದೆ.ಹೊರ ಊರುಗಳಿಂದ ಮಸಾಜ್ ನೆಪದಲ್ಲಿ ಯುವತಿಯರನ್ನು ಕರೆಸಿ ಕೊಂಡು ಲೈಂಗಿಕವಾಗಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು ಸಧ್ಯ ಪೊಲೀಸರು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ