ಹುಬ್ಬಳ್ಳಿ –
ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲು ಬಂದ್ರು. ಪ್ರತಿಭಟನೆ ಮಾಡಿ ದಿಕ್ಕಾರದ ಘೋಷಣೆಗಳನ್ನು ಕೂಗಿದ್ರು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕೃಷಿ ಸಚಿವ ಬಿ ಸಿ ಪಾಟೀಲ್ ಪ್ರತಿಕೃತಿಯನ್ನು ದಹನ ಮಾಡದೇ ಪೊಲೀಸರಿಗೆ ಕೊಟ್ಟು ಹೋದ್ರು ಪ್ರತಿಭಟನಾಕಾರರು.

ಹೌದು ಇಂಥಹದೊಂದು ಪ್ರತಿಭಟನೆ ಹುಬ್ಬಳ್ಳಿಯಲ್ಲಿ ನಡೆಯಿತು.ಕೇಂದ್ರ ಸರ್ಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಯವರು ಪ್ರತಿಭಟನೆ ಮಾಡಿದರು.ನಗರದ ಚನ್ನಮ್ಮ ವೃತ್ತದಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿಯ ಮುಖಂಡ ಸಿದ್ದು ತೇಜಿ ನೇತ್ರತ್ವದಲ್ಲಿ ಈ ಒಂದು ಪ್ರತಿಭಟನೆ ನಡೆಯಿತು. ದಿನಕ್ಕೊಂದು ಕೇಂದ್ರ ಸರ್ಕಾರ ಹೊಸ ಹೊಸ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಇದರಿಂದ ದೇಶದ ಅಲ್ಲದೇ ರಾಜ್ಯದ ರೈತರಿಗೂ ತುಂಬಾ ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಇನ್ನೂ ರಾಜ್ಯ ಕೃಷಿ ಸಚಿವ ಬಿಸಿ ಪಾಟೀಲ ಕೂಡಾ ಹೋರಾಟಗಾರರ ಮತ್ತು ರೈತರಿಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಕೂಡಲೇ ಇವರನ್ನು ಸಚಿವ ಸಂಪುಟದಲ್ಲಿ ಇಟ್ಟುಕೊಳ್ಳಬಾರದೆಂದು ಪ್ರತಿಭಟನಾಕಾರರು ಒತ್ತಾಯವನ್ನು ಮಾಡಿದರು.

ಪ್ರತಿಭಟನೆಯಲ್ಲಿ ಬಾಬಾಜಾನ ಮುಧೋಳ, ವಿಜಯ ಗುಂಟ್ರಾಳ,ನಿಂಗಪ್ಪ ಸಂಕಣ್ಣವರ, ಫೀರಜಾದೆ,ಬಿ ಎ ಮುಧೋಳ, ರಮೇಶ ಭೋಸಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪ್ರಧಾನಿ ಮೊದಿ ಮತ್ತು ರಾಜ್ಯ ಕೃಷಿ ಸಚಿವ ಬಿಸಿ ಪಾಟೀಲರ ಪ್ರತಿಕೃತಿ ದಹನ ಮಾಡಲು ತೆಗೆದುಕೊಂಡು ಬಂದಿದ್ದ ರು.ಇವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ್ರು.