ಧಾರವಾಡ –
ಧಾರವಾಡ ಜಿಲ್ಲಾಧಿಕಾರಿ ಭದ್ರತಾ ಸಿಬ್ಬಂದಿ ಪ್ರಕಾಶ್ ಮಾಳಗಿ ಮತ್ತು ಇವರ ಸಹೋದರ ಸೇರಿಕೊಂಡು ಧಾರವಾಡದ ಯಾದವಾಡ ಗ್ರಾಮದಲ್ಲಿ ಸಾರ್ವಜನಿಕರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಧಾರವಾಡದಲ್ಲಿ ಪ್ರತಿಭಟನೆ ಮಾಡಿದರು.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಂತರ ಡಿಎಸ್ಪಿ ಹಾಗೂ ಜಿಲ್ಲಾ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಧಾರವಾಡ ತಾಲ್ಲೂಕಿನ ಯಾದವಾಡ ಗ್ರಾಮದವರಾದ ಪ್ರಕಾಶ ಮಾಳಗಿ ಮತ್ತು ಸಹೋದರ ಸೇರಿಕೊಂಡು ಗ್ರಾಮದಲ್ಲಿ ಸಾಮಾಜಿಕ ಅಶಾಂತಿಯನ್ನು ಮೂಡಿಸುತ್ತಿದ್ದಾರೆ.

ಅಲ್ಲದೇ ಗ್ರಾಮಸ್ಥರ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ ಇವರೊಂದಿಗೆ ಇವರ ಸಹೋದರ ಕೂಡಾ ಸೇರಿಕೊಂಡಿದ್ದು ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಇಬ್ಬರ ದಬ್ಬಾಳಿಕೆ ದೌರ್ಜನ್ಯ ಹೆಚ್ಚಾಗಿದ್ದು ಕೂಡಲೇ ಇವರ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದರು

ಜಿಲ್ಲಾಧಿಕಾರಿ ಕಚೇರಿ ಮುಂದೆ ನಂತರ ಡಿಎಸ್ಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಅಧಿಕಾರದ ದುರ್ಬಳಕೆಯನ್ನು ಮಾಡಿಕೊಳ್ಳುತ್ತಿದ್ದು ಕೂಡಲೇ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದರು.