ಹುಬ್ಬಳ್ಳಿ –
ಹುಬ್ಬಳ್ಳಿಯ ಉತ್ತರ ವಿಭಾಗದ ಉಪ ನೋಂದಣಾ ಧಿಕಾರಿಯನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ಮಾಡಿದರು.ಹೌದು ನಗರದ ವಿದ್ಯಾನಗರದ ಉತ್ತರ ಉಪ ನೋಂದಣಾಧಿಕಾರಿಗಳನ್ನು ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆಯನ್ನು ಮಾಡಲಾಯಿತು.

ವಿವಿಧ ಸಂಸ್ಥೆಗಳ ವತಿಯಿಂದ ಉಪ ನೋಂದಣಾ ಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯನ್ನು ಮಾಡಲಾಯಿತು.ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪವನ್ನು ಮಾಡಲಾಗಿದೆ.ಸಣ್ಣ ಕೆಲಸಕ್ಕೂ ವಾರಗಟ್ಟಲೇ ಕಾಯಿಸುತ್ತಿದ್ದಾರೆ.ಇದರಿಂದ ಬಿಲ್ಡರ್ ಗಳು, ರೈತರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾ ಗುತ್ತಿದೆ.ಜನರಿಂದ ಆದಾಯ ಪಡೆಯುವ ಕಚೇರಿ ಯಲ್ಲಿ ಮೂಲ ಸೌಕರ್ಯಗಳಿಲ್ಲ.ಕುಡಿಯುವ ನೀರೂ ಇಲ್ಲದೇ ಕಚೇರಿ ಗಬ್ಬು ನಾರುತ್ತಿದೆ.ಈ ಕೂಡಲೇ ಇಬ್ಬರೂ ಉಪ ನೋಂದಣಾಧಿಕಾರಿ ಗಳನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯ ವನ್ನು ಮಾಡಿದರು.ಇದೇ ವೇಳೆ ಈ ಕೂಡಲೇ ಕಚೇರಿಗೆ ಉತ್ತಮ ಅಧಿಕಾರಿಗಳನ್ನು ನೇಮಿಸಬೇ ಕೆಂದು ಎಂದು ಆಗ್ರಹವನ್ನು ಮಾಡಿದರು.ಕ್ರೆಡೈ ಅಧ್ಯಕ್ಷ ಪ್ರದೀಪ ರಾಯ್ಕರ, ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಜಿಲ್ಲಾ ಬಾಂಡ್ ರೈಟರ್ಸ್ ಅಸೋಸಿಯೇಷನ್ ತಾಲೂಕು ಘಟಕದ ಅಧ್ಯಕ್ಷ ಶಾಂತರಾಜ ಪೋಳ, ವೀರೇಶ ಉಂಡಿ, ವಕೀಲ ಸದಾನಂದ ದೊಡ್ಡಮನಿ ಸೇರಿದಂತೆ ಹಲವರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

 
			

 
		 
			



















