ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ಮಹಾನಗರದ ವತಿಯಿಂದ ಪ್ರತಿಭಟನೆ ನಡೆಯಿತು. B.ed ಸೀಟುಗಳ ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹುಬ್ಬಳ್ಳಿ ಮಹಾನಗರದ ಪಿ.ಸಿ.ಜಾಬೀನ್ ಕಾಲೇಜ್ ಮುಂಭಾಗ ಪ್ರತಿಭಟನೆ ಮಾಡಲಾಯಿತು.

ಈ ಒಂದು ಪ್ರತಿಭಟನೆಯಲ್ಲಿ ರಾಕೇಶ್ ಕರ್ಜಗಿಮಠ ಮಾತಾನಾಡಿ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸರಿಪಡಿಸ ಬೇಕು ಎಂದು ಒತ್ತಾಯವನ್ನು ಮಾಡಿದರು.ನಗರ ವಿದ್ಯಾರ್ಥಿನಿ ಪ್ರಮುಖ ಪುಷ್ಪಾ ಗಾಡರೆಡ್ಡಿ ನಗರ ಸಹ ಕಾರ್ಯದರ್ಶಿ ಯುಕ್ತಾ ಕದಂ, ಸೋಮು ಪಾಟೀಲ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಹಲವರು ಪಾಲ್ಗೊಂಡಿದ್ದರು.