ಹುಬ್ಬಳ್ಳಿ - ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ಸದಸ್ಯರು ಸಿಐಟಿಯು ನೇತೃತ್ವದಲ್ಲಿ ಇಂದು ರೈತ ಕಾರ್ಮಿಕ ವಿರೋಧಿ ಹೊಸ ಕಾನೂನುಗಳ ಪ್ರತಿಗಳನ್ನು ಧಹಿಸಿ ಪ್ರತಿಭಟನೆ ನಡೆಸಲಾಯಿತು. ನಗರದ APMC ಯಾರ್ಡ್ ನಲ್ಲಿ ಪ್ರತಿಭಟನೆ ಮಾಡಲಾಯಿತು.ಕೇಂದ್ರ ಸರಕಾರ ಕೂಡಲೇ ಈ ಜನವಿರೋಧಿ ಕಾನೂನುಗಳನ್ನು ವಾಪಸ್ಸ ಪಡೆಯಲು ಆಗ್ರಹಿಸಿದರು ನಂತರ ಎಪಿಎಂಸಿ ಕಾರ್ಯದರ್ಶ
ಿ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಾಗೂ ಜನ ವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೇಶದ ರೈತ ಸಮೂಹವು ದೆಹಲಿ ಸೇರಿದಂತೆ ದೇಶದಾಧ್ಯಂತ ನಡೆಸುತ್ತಿರುವ ಹೋರಾಟ ತೀವ್ರವಾಗುತ್ತಿದೆ. ಇದೇ ಸಂದರ್ಭದಲ್ಲಿ ಬಂಡವಾಳಗಾರರ ಪರವಾಗಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ಧುಗೊಳಿಸಲು ಒತ್ತಾಯಿಸಿ ಹಾಗು ಇತರೆ ಬೇಡಿಕೆಗಳನ್ನು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕೆಲಸದ ಸ್ಥಳಗಳಲ್ಲಿ ರಾಷ್ಟ್ರಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.

ಇಂದು ರಾಜ್ಯಾದ್ಯಂತ ಸಂಘಟಿತ ಕಾರ್ಮಿಕರು ಪ್ರತಿ ಕಾರ್ಖಾನೆಗಳ ಎದುರು ಹಾಗು ಬಿಸಿಯೂಟ, ಅಂಗನವಾಡಿ, ಗ್ರಾಮ ಪಂಚಾಯತ, ಹಮಾಲಿ, ಬೀದಿಬದಿ, ಬೀಡಿ, ಕಟ್ಟಡ ಮುಂತಾದ ಅಸಂಘಟಿತ ಕಾರ್ಮಿಕರು ಮತ್ತು ವಿವಿಧ ಗುತ್ತಿಗೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿ ಕರಾಳ ಕಾನೂನುಗಳಾದ 4 ಕಾರ್ಮಿಕ ಸಂಹಿತೆಗಳು, ಮೂರು ಕೃಷಿ ಕಾನೂನುಗಳು ಹಾಗು ವಿದ್ಯುತ್ ಕಾನೂನುಗಳ ಪ್ರತಿಗಳನ್ನು ಸುಡುವುದರ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ.

ಹೊಸ ವರ್ಷದ ದಿನವನ್ನು “ಕಾರ್ಮಿಕ ಹಕ್ಕುಗಳನ್ನು ಉಳಿಸುತ್ತೇವೆ, ರೈತರ ಬದುಕನ್ನು ರಕ್ಷಿಸುತ್ತೇವೆ, ಕಾರ್ಫೋರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ.” ಎಂಬ ಪ್ರತಿಜ್ಞೆ ಯೊಂದಿಗೆ ಸ್ವಾಗತಿಸಲಾಗುತ್ತಿದೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಒಕ್ಕೂಟದ ಅಧ್ಯಕ್ಷ ಬಸವಣ್ಣೆಪ್ಪ ನೀರಲಗಿ, ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ ಮುಖಂಡರಾದ ಕರಿಯಪ್ಪ ದಳವಾಯಿ, ಕರಿಯಪ್ಪ ಗಿರಿಸಾಗರ, ಹುಸೇನಸಾಬ ನದಾಫ್, ಕತಾಲಸಾಬ ಮುಲ್ಲಾ, ಮೊಹ್ಮದರಫೀಕ್ ಮುಳಗುಂದ, ಹನಮಮತ ಅಂಬಿಗೇರ, ಗಾಳೆಪ್ಪ ಮುತ್ಯಾಳ ಮುಂತಾದವರು ನೇತೃತ್ವವಹಿಸಿದ್ದರು