ಹುಬ್ಬಳ್ಳಿ –
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಪ್ರಯಾಣಿಕರಿಗೆ ಅಕ್ಷರಶಃ ಮೃತ್ಯು ಸ್ವರೂಪವಾಗಿದ್ದು ಇದಕ್ಕೆ ಅಪಘಾತಗಳೇ ಸಾಕ್ಷಿ. ಬೆಂಗಳೂರಿನಿಂದ ಪುಣೆಯ ವರೆಗೆ ಹೆದ್ದಾರಿ ಸಂಪೂರ್ಣ ಚತುಷ್ಪಥ ರಸ್ತೆಯಾಗಿದೆ ಆದರೆ ಈ ಬೈಪಾಸ ರಸ್ತೆ ಮಾತ್ರ (32 ಕಿ.ಮೀ) ಕಿರಿದಾದ (single) ರಸ್ತೆಯಾಗಿದ್ದು ಇದರಿಂದಾಗಿ ಪ್ರತೀ ವರ್ಷ ನೂರಾರು ಅಮಾಯಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.ಈ ಬೈಪಾಸ್ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆಯಾಗಿ ಮಾಡಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

ದಿನಾಂಕ 18/01/2021 ರಂದು ಬೆಳಿಗ್ಗೆ 11:00 ಗಂಟೆಗೆ ನರೇಂದ್ರ ಕ್ರಾಸ್ ಬಳಿ ಇರುವ ಟೋಲ್ ಗೇಟ್ ಗೆ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು.ಈ ಜನಪರ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಧಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವ ಅಭಿಮಾನಿಗಳು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನೀಲ್ ಕುಮಾರ್ ಪಾಟೀಲ್ ವಿನಂತಿಸಿಕೊಂಡಿದ್ದಾರೆ.
