ಧಾರವಾಡ
ಧಾರವಾಡದಲ್ಲಿ ಪುಟ್ ಪಾತ್ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತವಾಗಿದೆ. ಅಂಗಡಿಗಳ ತೆರವು ಕಾರ್ಯಚರಣೆ ಮಾಡುತ್ತಿರುವುದನ್ನು ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ನಗರದ ಕೋರ್ಟ್‌ತದ ಮಾಳಮಡ್ಡಿ ರಸ್ತೆಯಲ್ಲಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜಯ ಕರ್ನಾಟಕ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಮುಂಜಾನೆ ಪಾಲಿಕೆಯ ಅಧಿಕಾರಿಗಳ ತೆರವು ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಸಂಘಟನೆಗಳ ಮುಖಂಡರು ಪ್ರತಿಭಟನೆಗೆ ಮಾಡಿದರು . ಅಲ್ಲದೆ ಕೊರೊನಾ ಮಹಾಮಾರಿಯಿಂದ ಈಗಾಗಲೇ ಹಲವು ಕುಟುಂಬಗಳು ಬಿದಿಗೆ ಬಂದಿವೆ.

ಈಗ ಕೊಂಚ ಅನಲಾಕ್‌ನಿಂದಾಗಿ ಅಂಗಡಿಗಳನ್ನು ಓಪನ ಮಾಡಿಕೊಂಡು ವ್ಯಾಪಾರ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಸೂಚನೆ ನೀಡದೇ ಅತಿಕ್ರಮಣ ತೆರವು ಹೆಸರಿನಲ್ಲಿ ಅಂಗಡಿಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

ಕೂಡಲೇ ಪಾಲಿಕೆ ಅಧಿಕಾರಿಗಳು ತಕ್ಷಣವೇ ತೆರವು ಕಾರ್ಯಾಚರಣೆ ನಿಲ್ಲಿಸಿ ಅಂಗಡಿಕಾರರಿಗೆ ಬೇರೆಯ ವ್ಯವಸ್ಥೆ ಮಾಡಿ ನಂತರ ತೆರವು ಮಾಡಬೇಕು ಅಗ್ರಹಿಸಿದರು. ಅಲ್ಲದೆ ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಅತಿಕ್ರಮಣ ತೆರವು ಸ್ಥಗಿತ ಮಾಡಿಲಾಗಿದೆ.