ಚನ್ನಪಟ್ಟಣ –
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಚನ್ನಪಟ್ಟಣ ದಲ್ಲಿ ನಡೆದಿದೆ ಹೌದು ಬಿಇಒ ರಾಮಲಿಂಗಯ್ಯ ಅವರು ತಾಲ್ಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಗರದ ಬಿಇಒ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಶಿಕ್ಷಕರಿಗೆ ಒಟ್ಟು ₹ 50 ಲಕ್ಷ ಆರೋಗ್ಯ ವಿಮಾ ಭತ್ಯೆ ನೀಡಬೇಕು. ಇದೀಗ ತಾಲ್ಲೂಕು ಪಂಚಾಯಿತಿಗೆ ಬಂದಿರುವ ₹10 ಲಕ್ಷ ಅನುದಾನದಲ್ಲಿ ಆದ್ಯತೆ ಮೇರೆಗೆ ಕಡತಗಳನ್ನು ಸಹಿ ಮಾಡಿ ಕಳಿಸಿಕೊಡುವಂತೆ ಹದಿನೈದು ದಿನಗಳಿಂದ ಶಿಕ್ಷಕರು ಬಿಇಒ ಕಚೇರಿಗೆ ಬರುತ್ತಿದ್ದಾರೆ. ಈ ಕಡತವನ್ನು ಮೇಲಾಧಿಕಾರಿಗಳಿಗೆ ಕಳಿಸಲು ಬಿಇಒ ಸಹಿ ಅಗತ್ಯವಾಗಿದೆ. ಆದರೆ ಸ್ಪಂದಿಸುತ್ತಿಲ್ಲ ಎಂದು ಆರೋಪಿ ಸಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಬಿಇಒ ಅವರು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಆದರೆ, ಬಿಇಒ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸಂಘದ ಪದಾಧಿಕಾರಿಗಳು ಚರ್ಚಿಸಿ ಕಡತಕ್ಕೆ ಸಹಿ ಮಾಡಿಕೊಡುವಂತೆ ಮನವಿ ಮಾಡಿದ್ದೆವು ಆದರೆ, ಅವರು ಶಾಲೆ ಕೆಲಸದ ವೇಳೆ ಕಚೇರಿಗೆ ಬರಬೇಡಿ, ಶಾಲೆ ಮುಗಿಸಿ ಬನ್ನಿ ಎಂದರು.
ಈ ನಿಟ್ಟಿನಲ್ಲಿ ಶಾಲೆ ಕೆಲಸ ಮುಗಿಸಿ ಸಂಜೆ ಬಂದಿದ್ದೇವೆ. ಆದರೆ ಈಗ ಬಿಇಒ ಇಲ್ಲ. ದೂರವಾಣಿ ಕರೆ ಮಾಡಿದರೆ ಬರಲು ಆಗೋಲ್ಲ ಎನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿ ದರು.ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎಂ. ನಾಗೇಶ್ ಮಾತನಾಡಿ, ತಾಲ್ಲೂಕಿನ ಶಿಕ್ಷಕರ ಹಲವು ಕಡತಗಳಿಗೆ ಬಿಇಒ ಸಹಿ ಮಾಡಿಲ್ಲ. ಈ ಬಗ್ಗೆ ಶಿಕ್ಷಕರು ಸಾಕಷ್ಟು ಬಾರಿ ಅಲೆದಾಡುವಂತಾಗಿದೆ.
ಹಲವು ಶಿಕ್ಷಕರಿಗೆ ವೈದ್ಯಕೀಯ ವಿಮೆಯ ಹಣ ಪಡೆಯಬೇಕಿದೆ. ಕಳೆದ 15 ದಿನದಿಂದ ನಾವೆಲ್ಲಾ ಸಂಜೆ ವೇಳೆ ಬಂದು ಬಿಇಒ ಸಿಗದೆ ವಾಪಸ್ ಹೋಗಿದ್ದೇವೆ. ಅಲ್ಲದೆ ಜಿಲ್ಲಾ ಉಪನಿರ್ದೇಶಕರಿಗೂ ಸಹ ಈ ಬಗ್ಗೆ ತಿಳಿಸಿದ್ದೇವೆ. ಆದರೂ ಶಿಕ್ಷಕರ ಕಡತಗಳಿಗೆ ಸಹಿ ಮಾಡಿಲ್ಲ ಎಂದು ಆರೋಪಿಸಿದರು.ಬಿಇಒ ಅವರು ಜಿಲ್ಲಾಧಿಕಾ ರಿಗಳ ಸಭೆಯ ನಿಮಿತ್ತ ರಾಮನಗರಕ್ಕೆ ಹೋಗಿದ್ದಾರೆ. ಅವರು ಸಿಗುತ್ತಾರೆ. ಬಂದು ಮಾತುಕತೆ ನಡೆಸಿ ಎಂದು ಕಚೇರಿ ಸಿಬ್ಬಂದಿ ತಿಳಿಸಿದ ನಂತರ ಬೀಗ ತೆರೆದು ಪ್ರತಿಭಟನೆ ವಾಪಸ್ ಪಡೆಯಲಾಯಿತು.
ರಾಜ್ಯ ಎಸ್‌ಡಿಎಂಸಿ ಸಮನ್ವಯ ಸಮಿತಿಯ ಉಪಾಧ್ಯಕ್ಷ ನಾಗವಾರ ಶಂಭೂಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಬೋರೇಗೌಡ, ಇತರರು ಇದ್ದರು.
ಸುದ್ದಿ ಸಂತೆ ನ್ಯೂಸ್ ಚನ್ನಪಟ್ಟಣ…..