ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿನ ಜಲಮಂಡಳಿ ನೀರಿನ ಬಾಕಿ ವಸೂಲಿಗೆ ಖಾಸಗೀಕರಣ ವಿರೋಧಿಸಿ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಿಳಾ ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ ನಿವಾಸದ ಮುಂದೆ ಪ್ರತಿಭಟನೆಯನ್ನು ಮಾಡಲಾಯಿತು.
ಹುಬ್ಬಳ್ಳಿ ಧಾರವಾಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ದೀಪಾ ನಾಗರಾಜ್ ಗೌರಿ ಇವರ ನೇತೃತ್ವ ದಲ್ಲಿ ಜನ್ನತ್ ನಗರ, ಲಕ್ಷ್ಮಿ ಸಿಂಗನಕೆರೆ , ತೇಜಸ್ವಿನಿ ನಗರ, ಆನಂದ ನಗರದ ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಿದರು
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾದ ಅರವಿಂದ್ ಬೆಲ್ಲದರ ಮನೆಗೆ ಮುತ್ತಿಗೆ ಹಾಕಿ,ನೀರಿನ ಕರ ಬಾಕಿ ಇರುವ ಬಡ ಕುಟುಂಬ ಗಳ ಕುಡಿಯುವ ನೀರಿನ ಸಂಪರ್ಕವನ್ನು ಮಾರ್ಚ್ ತಿಂಗಳಿನಿಂದ ಖಾಸಗೀಕರಣ ಗೊಂಡ ಜಲಮಂಡಳಿಯು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿರುತ್ತಾರೆ ಇದನ್ನು ಹಿಂಪಡೆಯಬೇಕು ಹಾಗೂ ಬಾಕಿ ಇರುವ ನೀರಿನ ಕರವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಲಾಯಿತು.
ಶಾಸಕರ ಮನೆಯ ಮುಂದೆ ಪ್ರತಿಭಟನೆ ಮಾಡಲಾಯಿತು. ದೀಪಾ ಗೌರಿ ಅವರೊಂದಿಗೆ ಕಾಂಚನ ಘಾಟ್ಗೆ ,ಚೇತನಾ ಲಿಂಗದಾಳ್ ,ಸಂಗೀತಾ ಪೂಜಾರ ಅಕ್ಕಮ್ಮ ಕಂಬಳಿ ಜ್ಯೋತಿ ವಾಲಿಕಾರ
ಲಕ್ಷ್ಮಿ ಗುತ್ತೆ, ಸಾವಿತ್ರಿ, ನೇತ್ರಾ ಅರಗಡೆ, ಸುಜನ್ ಕಾಕೆ, ಪುಷ್ಪಾ ಪಾಟೀಲ್, ಲತಾ ನಾಯ್ಕ್, ಮಂಜುಳಾ ಹೆಬ್ಬಳ್ಳಿ ಸಲ್ಮಾ ಮುಲ್ಲಾ, ಭಾವನಾ ಬಿಳಾರ್, ಮಂಗಳಾ ಘೋಡಕೆ ಸೇರಿದಂತೆ ನೊಂದ ನೂರಾರು ಮಹಿಳೆಯರು ಈ ಒಂದು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.