ಹುಬ್ಬಳ್ಳಿ –
ತೈಲ ಬೆಲೆ ಏರಿಕೆಯ ವಿರುದ್ಧ ರಾಜ್ಯವ್ಯಾಪಿ ಕೈ ಪಕ್ಷದ ಹೈ ಕಮಾಂಡ್ ಕರೆ ನೀಡಿರುವ ರಾಜ್ಯವ್ಯಾಪಿಯ ಪ್ರತಿಭಟನೆಗೆ ಹುಬ್ಬಳ್ಳಿಯಲ್ಲೂ ಬೆಂಬಲ ಕಂಡು ಬಂದಿದೆ.ಹೌದು ನಗರದಲ್ಲಿ ಬೆಲೆ ಏರಿಕೆಯ ವಿರುದ್ಧ ಕೈ ಪಕ್ಷದ ಮಹಿಳಾ ಘಟಕ ದವರು ಪ್ರತಿಭಟನೆ ಮಾಡಿದರು

ಹೌದು ಬೆಲೆ ಏರಿಕೆಯ ವಿರುದ್ದ ನಗರದಲ್ಲಿ ಇಂದು ಹುಬ್ಬಳ್ಳಿ ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೀಪಾ ಗೌರಿ ಯವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು

ಇಂದಿರಾನಗರ್ ಹಾಗೂ ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರುಗಳು,ಇಂಡಿಪಂಪ್ ಪೆಟ್ರೋಲ್ ಬಂಕ್, ಆನಂದ ನಗರ ಹಾಗೂ ಕಾರವಾರ ರಸ್ತೆಯ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ಮಾಡಿ ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿದರು

ಬ್ಲಾಕ್ ಮಟ್ಟದ ಈ ಒಂದು ಪ್ರತಿಭಟನೆಯಲ್ಲಿ ದೀಪಾ ಗೌರಿ, ಚೇತನಾ ಲಿಂಗದಾಳ್,ಬಾಳಮ್ಮ ಜಂಗಿನವರ್, ಅಕ್ಕಮ್ಮ ಕಂಬಳಿ, ಪ್ರೀತಿ ಜೈನ, ಖೈರುನ್ನೀಸಾ ಧಾರವಾಡ, ಮಂಜುಳಾ ಹೆಬ್ಬಳ್ಳಿ, ಸಲ್ಮಾ ಮುಂತಾದವರು ಉಪಸ್ಥಿತರಿದ್ದರು.
