ಧಾರವಾಡ –
ಕುಂದಗೋಳದ ಅಂಚಟಗೇರಿಯಲ್ಲಿ ನೂತನ ಪಶು ಸಂಗೋಪನಾ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ರನ್ನು ಮರಾಠ ಸಮುದಾಯದ ಮುಖಂಡರು ಧಾರವಾಡದಲ್ಲಿ ಭೇಟಿಯಾಗಿ ಸ್ವಾಗತಿಸಿದರು. ಇದೇ ವೇಳೆ ರಾಜ್ಯದಲ್ಲಿ ಹೊಸದಾಗಿ ಮರಾಠ ಸಮುದಾಯ ಅಭಿವೃದ್ಧಿ ನಿಗಮ ಮಾಡಲು ಶ್ರಮಿಸಿದ ಸಚಿವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಧಾರವಾಡ ಜಿಲ್ಲಾ ಮರಾಠ ಕ್ರಾಂತಿಮೌನ ಮೋರ್ಚಾ ಘಟಕದಿಂದ ಸಚಿವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಭೀಮಣ್ಣಾ ಕಸಾಯಿ ನೇತ್ರತ್ವದಲ್ಲಿ ಸಚಿವರನ್ನು ಸನ್ಮಾನಿಸಿ ಅಭಿನಂದಿಸಿ ಧನ್ಯವಾದಗಳನ್ನು ಹೇಳಿದರು.

ಇದರೊಂದಿಗೆ ಮುಖ್ಯವಾಗಿ ಇದೇ ವೇಳೆ ಸಮುದಾಯದ ಪ್ರಮುಖ ಬೇಡಿಕೆಯಾದ 3 B ಇಂದ 2A ಗೆ ಮೀಸಲಾತಿಯನ್ನು ನೀಡುವಂತೆ ಸಚಿವರನ್ನು ಒತ್ತಾಯಿಸಿ ಮನವಿ ನೀಡಲಾಯಿತು.

ಬಸವರಾಜ ಜಾಧವ , ನಾರಾಯಣ ಕೋಮೋಜಿ , ಪುಂಡಲೀಕ ನೀರಲಕಟ್ಟಿ ,ಜ್ಯೋತಿಭಾ ಜಾಧವ ,ಶಂಕರ ದೋಡಮನಿ, ಈಶ್ವರ ಧರ್ಮಾಯಿ , ಮಡಿವಾಳಪ್ಪ ಕೋಮೋಜಿ , ಶಿವಾಜಿ ಕೋಮೋಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.