
ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಪೊಲೀಸರ ದರ್ಪ ಕಂಡು ಬಂದಿದೆ. ಕಾರ್ಮಿಕನ ಮೇಲೆ ಪಿಎಸ್ ಐ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.ನಗರದ ಹಳೇ ಹುಬ್ಬಳ್ಳಿಯ ಠಾಣೆಯ ಸಬ್ ಇನ್ಸಪೆಕ್ಟರ್ ಸುಖಾನಂದ ಶಿಂಧೆಯಿಂದ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

ವಾಹನ ತಪಾಸಣೆ ವೇಳೆ ಕಾರ್ಮಿಕನಿಗೆ ಲಾಠಿಯಿಂ ದ ತೆಲೆಗೆ ಹೊಡೆದಿದ್ದಾರಂತೆ ಪಿಎಸ್ ಐ ಅವರು. ರೆಹಮತವುಲ್ಲಾ ಕಾಗದಗಾರ ಹಲ್ಲೆಗೆ ಒಳಗಾದ ಕಾರ್ಮಿಕನಾಗಿದ್ದಾನೆ.ಎಟಿಎಂಗೆ ಹಣ ಬಿಡಿಸಲು ಹೋಗುವ ವೇಳೆ ಪೊಲೀಸರಿಂದ ಹಲ್ಲೆಯಾಗಿದೆ

ದಿನಸಿ ಖರೀದಿಗೆ ಹಣ ಡ್ರಾ ಮಾಡಿಕೊಂಡು ಹೋಗು ವ ವೇಳೆ ಈ ಒಂದು ಘಟನೆ ನಡೆದಿದೆ.ಹಳೇ ಹುಬ್ಬ ಳ್ಳಿಯ ದೇವರಗುಡಿಹಾಳ ಕ್ರಾಸ ಬಳಿ ಈ ಒಂದು ಘಟನೆ ನಡೆದಿದೆ.ಲಾಠಿಯಿಂದ ತೆಲೆಗೆ ಹೊಡೆದ ಪರಿ ಣಾಮ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿ ಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮಾರಣಾಂತಿಕವಾಗಿ ಗಾಯಗೊಂಡಿರುವ ಕಾರ್ಮಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.ಗಾಯಾಳು ಕಾರ್ಮಿಕನ ಸಂಬಂಧಿಕರಿಂದ ಪಿಎಸ್ ಐ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಅಲ್ಲದೇ ಹಲ್ಲೆಯನ್ನು ಮಾಡಿ ರುವ ಪಿಎಸ್ ಐ ವಿರುದ್ದ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ ಯುವಕನ ಸಂಬಂಧಿಕರು