ACB ಬಲೆಗೆ PSI – 40 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್ ಆದ ಪಿಎಸ್ ಐ…..

Suddi Sante Desk

ಚಿಕ್ಕೋಡಿ –

ಎಸಿಬಿ ಬಲೆಗೆ ಪಿಎಸ್ ಐ ರೊಬ್ಬರು ಬಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಜಿಲ್ಲೆಯ ಚಿಕ್ಕೊ ಡಿ ಯಲ್ಲಿ ಎ.ಸಿ.ಬಿ ದಾಳಿಯನ್ನು ಮಾಡಲಾಗಿದೆ.ಈ ಒಂದು ಕಾರ್ಯಾಚರಣೆಯಲ್ಲಿ ಪಿಎಸ್ಐ ರನ್ನು ಟ್ರ್ಯಾಪ್ ಮಾಡಲಾಗಿದೆ.ಬೆಳಗಾವಿ ಜಿಲ್ಲೆ ಚಿಕ್ಕೋಡಿ ಸದಲಗಾ ಪಿ.ಎಸ್.ಐ ಕುಮಾರ್ ಬಿ ಹಿತ್ತಲಮನಿ ಅವರೇ ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದು ಈಗ ಜೈಲು ಸೇರಿದ್ದಾರೆ‌‌.

ಪಿಎಸ್ಐ ಕುಮಾರ್ ಹಿತ್ತಲಮನಿ ಮೇಲೆ ದಾಳಿ ಮಾಡಿದ ಎ.ಸಿ.ಬಿ ಹಣದ ಸಮೇತವಾಗಿ ಬಂಧನ ಮಾಡಿ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡತಾ ಇದ್ದಾರೆ.ಬೆಳಗಾವಿ ಎಸಿಬಿ ಅಧಿಕಾರಿಗಳಿಂದ ಈ ಒಂದು ದಾಳಿ ನಡೆದಿದೆ.ರಾಜು ಪಚ್ಚಾಪೂರೆ ಎಂಬ ಪಾನ್ ಶಾಪ್ ಮಾಲೀಕನ ಅಂಗಡಿ ವಿಚಾರದಲ್ಲಿ ಅನಧಿಕೃತ ಅಂಗಡಿ ಎಂದು ಅವನಿಗೆ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಪಿ.ಎಸ್.ಐ ಕುಮಾರ ಹಿತ್ತಲಮನಿ.

40 ಸಾವಿರ ಹಣ ಲಂಚ ಮುಂಗಡ ನೀಡುವಾಗ ಬಲೆಗೆ ಬಿದ್ದಿದ್ದಾರೆ ಪಿ.ಎಸ್.ಐ.ಕುಮಾರ್ ಹಿತ್ತಲ ಮನಿ ಮತ್ತು ಇಬ್ಬರು ಪೊಲೀಸ್ ಕಾನಸ್ಟೇಬಲ್ ಮೇಲೆ‌ ದಾಳಿಯನ್ನು ಮಾಡಲಾಗಿದೆ.ಶ್ರೀಶೈಲ ಗಡ್ಡಿ. ಮತ್ತು ಬಂಗಿ ಎ.ಸಿ.ಬಿ ಬಲೆಗೆ ಬಿದ್ದ ಸಿಬ್ಬಂದಿಗಳಾಗಿ ದ್ದಾರೆ‌.ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವ ದಲ್ಲಿ ಈ ಒಂದು ದಾಳಿ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.