ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಮತ್ತೆ ಗ್ಯಾಸ್ ಲಿಕೇಜ್ ಕಾಣಿಸಿಕೊಂಡಿದೆ ಹೌದು ಗ್ಯಾಸ್ ಲಿಕೇಜ್ ಆಗಿರುವ ಘಟನೆ ನಗರದ ತೆಂಗಿನ ಕಾಯಿ ಲೇಔಟ್ ನಲ್ಲಿ ಘಟನೆ.ಮನೆ ಮನೆಗೆ ಗ್ಯಾಸ್ ಕಲೆಕ್ಷನ್ ಕೊಡುವ ಪೈಪ್ ನಲ್ಲಿ ಕಾಣಿಸಿಕೊಂಡಿದೆ ಲಿಕೇಜ್

ತೆಂಗಿನಕಾಯಿ ಲೇಔಟ್ ನ ರಸ್ತೆ ಪಕ್ಕದಲ್ಲಿ ಈ ಒಂದು ಘಟನೆ ಕಂಡು ಬಂದಿದೆ.ಇನ್ನೂ ಭಯದಿಂದ ಮನೆಯಿಂದ ಹೊರಗೆ ಬಂದಿದ್ದಾರೆ ಜನರು.ಲಿಕೇಜ್ ಆಗಿ ಕಾಣಿಸಿಕೊ ಳ್ಳುತ್ತಿದ್ದಂತೆ ಹತ್ತಿಕೊಂಡಿದೆ ಬೆಂಕಿ
ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದರು ವಿದ್ಯಾನಗರ ಮತ್ತು ಗೋಕುಲ ಠಾಣೆ ಪೊಲೀಸರು.ಇವರೊಂದಿಗೆ
ಸ್ಥಳಕ್ಕೆ ಆಗಮಿಸುತ್ತಿದ್ದಾರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಆದರೂ ಭಯದಲ್ಲಿದ್ದಾರೆ ಲೇಔಟ್ ನಿವಾಸಿಗಳು