ನುರಿತ ಶಿಕ್ಷಕರಿಗಾಗಿ ಸಾರ್ವಜನಿಕರ ಪ್ರತಿಭಟನೆ – ಸಾರ್ವಜನಿಕರ ಹೋರಾಟಕ್ಕೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ…..

Suddi Sante Desk

ಚಿಕ್ಕೋಡಿ

ಕೇಂದ್ರಿಯ ವಿದ್ಯಾಲಯದಲ್ಲಿ ಶಿಕ್ಷಕರನ್ನು ನಿಯೋಜಿಸು ವಂತೆ ಆಗ್ರಹಿಸಿ ಬೆಳಗಾವಿ ಯ ಚಿಕ್ಕೋಡಿಯ ವಿದ್ಯಾಲಯ ಮಕ್ಕಳ ಪಾಲಕರು ಪ್ರತಿಭಟನೆ ನಡೆಸಿ ಸರಕಾರವನ್ನು ಆಗ್ರಹಿಸಿದರು.ಚಿಕ್ಕೋಡಿ ಹೊರವಲಯದಲ್ಲಿ ನಿರ್ಮಾಣ ವಾದ ಹೈಟಿಕ ಕೇಂದ್ರಿಯ ವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಇದೆ.ಆದರೇ ಶಿಕ್ಷಕರ ಕೊರತೆ ಹೆಚ್ಚಿದೆ.ಪ್ರತಿ ವಿಷಯಕ್ಕೆ ಒಬ್ಬೋಬ್ಬರು ಶಿಕ್ಷಕರು ವಿದ್ಯಾಲಯದಲ್ಲಿ ಇರಬೇಕು.ಆದರೇ ಮಕ್ಕಳ ಸಂಖ್ಯೆ ಅನುಗುಣವಾಗಿ ಶಿಕ್ಷಕರ ಕೊರತೆ ಎದುರಾಗಿದೆ.ಖಾಯಂ ಪ್ರಾಚಾರ್ಯ ನಿಯೋಜನೆ ಮಾಡಬೇಕು.ಆನ್ ಲೈನ್ ಬಿಟ್ಟು ಆಫ್ ಲೈನ್ ಕ್ಲಾಸ್ ನಡೆಸಬೇಕು ಎಂದು ಪಾಲಕರು ಒತ್ತಾಯಿಸಿದರು.

ವಿದ್ಯಾಲಯದಲ್ಲಿ ದೈಹಿಕ ಶಿಕ್ಷಕರು ಇದ್ದರೂ ಪ್ರಯೋಜನ ವಿಲ್ಲ.ಅವರಿಗೆ ಯಾವ ಆಟವು ಆಡಿಸಲು ಬರೋದಿಲ್ಲ ಕೂಡಲೇ ಅವರನ್ನು ಬದಲಾಯಿಸಬೇಕು ಮತ್ತು ಪುಲ್ ಟೈಮ ಶಿಕ್ಷಕರನ್ನು ನೇಮಕ ಮಾಡಬೇಕು ಮತ್ತು ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ಇಟ್ಟರು.ಇನ್ನೂ ಸ್ಥಳಕ್ಕೆ ಆಗಮೀಸಿದ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು. ನುರಿತ ಶಿಕ್ಷಕ ನಿಯೋಜನೆ ಮಾಡಲು ಸರಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಭರವಸೆ ನೀಡಿದರು.

ಚಿಕ್ಕೋಡಿ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇ ಕೆಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ವಿದ್ಯಾಲಯ ಮಂಜೂರು ಮಾಡಿಕೊಂಡು ಬಂದಿದ್ದು. ವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಒದಗಿಸಿದ್ದು. ಕೂಡಲೇ ನುರಿತ ಶಿಕ್ಷಕರ ನಿಯೋಜನೆ ಕ್ರಮ ವಹಿಸಲಾ ಗುತ್ತದೆ ಎಂದು ಪಾಲಕರಿಗೆ ಭರವಸೆ ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.