ಧಾರವಾಡ –
ಹೊಗುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಲಾರಿ ಸುಟ್ಟು ಕರಕಲಾದ ಘಟನೆ ದಾಂಡೇಲಿ ರಸ್ತೆಯಲ್ಲಿ ನಡೆದಿದೆ.

ಕಟ್ಟಿಗೆಯನ್ನು ತುಂಬಿಕೊಂಡು ದಾಂಡೇಲಿ ಕಡೆಗೆ ಲಾರಿ ಹೊರಟಿತ್ತು. ಹೊರಟಿದ್ದ ಸಮಯದಲ್ಲಿ ಏಕಾಏಕಿಯಾಗಿ ಲಾರಿ ಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೂಡಲೆ ಚಾಲಕ ಲಾರಿಯನ್ನು ನಿಲ್ಲಿಸಿದರು. ಕೆಳಗಿಳಿದು ಬೆಂಕಿ ನಿಯಂತ್ರಣ ಮಾಡಲು ಮುಂದಾಗಿದ್ದಾರೆ.
ಕಾರವಾರದಿಂದ ದಾಂಡೇಲಿ ಪೇಪರ್ ಕಾರ್ಖಾನೆ ಗೆ ಹೊರಟಿದ್ದು ದಾಂಡೇಲಿ ರಸ್ತೆಯ ಹುಲ್ತಿಕೋಟಿ ಕ್ರಾಸ್ ನಲ್ಲಿ ಈ ಒಂದು ಘಟನೆ ನಡೆದಿದೆ. ಕಟ್ಟಿಗೆಯನ್ನು ತುಂಬಿಕೊಂಡು ಲಾರಿ ಹೊರಟಿದ್ದ ಸಮಯದಲ್ಲಿ ಈ ಒಂದು ಅವಘಡ ನಡೆದಿದೆ.

ಮೊದಲು ಇಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಜೋರಾಗಿ ಹತ್ತಿಕೊಂಡು ಲಾರಿಯನ್ನು ಆವರಿಸಿಕೊಂಡಿತು. ಇನ್ನೂ ಕಾಡಿನಲ್ಲಿ ಈ ಒಂದು ಅವಘಡ ನಡೆದ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಲಾರಿ ಚಾಲಕ ಕ್ಲೀನರ್ ಪರದಾಡಿದ್ದು ಕಂಡು ಬಂದಿತು.ಸಧ್ಯ ಬೆಂಕಿಗೆ ಲಾರಿ ಮುಂದಿನ ಭಾಗ ಸುಟ್ಟು ಕರಕಲಾಗಿದೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.