ಧಾರವಾಡ –
ಜನೇವರಿ 15 ರಂದು ಹು-ಧಾ ಬೈಪಾಸ್ ನ
ಇಟಿಗಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಡಿದವರಿಗಾಗಿ ಧಾರವಾಡದಲ್ಲಿ ಸಾಮೂಹಿಕ ಪುಣ್ಯ ತಿಥಿ ಕಾರ್ಯಕ್ರಮವನ್ನು ಮಾಡಲಾಯಿತು.

ಒಂಬತ್ತನೇಯ ದಿನವಾದ ಇಂದು ಹೃದಯ ವಿದ್ರಾವಕ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಒಂಬತ್ತನೇ ದಿನವಾದ ಇಂದು ಧಾರವಾಡದಲ್ಲಿ ಪುಣ್ಯ ತಿಥಿ ಮಾಡಲಾಯಿತು.

ಧಾರವಾಡದ ಕೆಲಗೇರಿಯಲ್ಲಿ ಸಾಮೂಹಿಕ ಪುಣ್ಯ ತಿಥಿ ಕಾರ್ಯಕ್ರಮ ಮಾಡಲಾಯಿತು. ಇನ್ನೂ ಈ ಒಂದು ಕಾರ್ಯಕ್ರಮ ಏಪ೯ಡಿಸಿದ ಹಿನ್ನೆಲೆಯಲ್ಲಿ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

ಕೆಲಗೇರಿ, ಗಾಯತ್ರಿಪುರಂ,ದೊಡ್ಡನಾಯಕನಕೊಪ್ಪ, ಸಂಪಿಗೆನಗರ, ಬನಶ್ರಿನಗರ,ಬೇಂದ್ರೆನಗರ ಹಾಗೂ ಬೈಪಾಸ್ ರಸ್ತೆಯ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳೆಲ್ಲರೂ ಸೇರಿ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಕೆಲಗೇರಿ ಬೈಪಾಸ್ ಮೇಲ್ಸೇತುವೆ ಪಕ್ಕದಲ್ಲೇ ಒಂದು ಶಾಮಿಯಾನಾ ಹಾಕಿ ಮೃತರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಪುಣ್ಯತಿಥಿ ಆಚರಿಸಲಾಯಿತು.

ನಂತರ ಎಲ್ಲರೂ ಸೇರಿ ರಸ್ತೆಯಲ್ಲೇ (ಸರ್ವಿಸ್ ರಸ್ತೆ) ಕುಳಿತು ತಿಥಿ ಊಟ ಮಾಡಿ ಸರ್ಕಾರದ ವಿರುದ್ಧ ಹೆದ್ದಾರಿಯನ್ನು ಅಷ್ಟಪಥವಾಗಿ ಪರಿವರ್ತಿಸಲು ಆಗ್ರಹಿಸಿ ವಿನೂತನವಾಗಿ ಪ್ರತಿಭಟನೆಯನ್ನು ಮಾಡಿದರು. ಈ ಒಂದು ಕಾರ್ಯಕ್ರಮದಲ್ಲಿ ಕಲಾವಿದ ಮಂಜುನಾಥ ಹಿರೇಮಠ, ರುದ್ರಗೌಡ ಪಾಟೀಲ್, ಬಸವರಾಜ ಕೊರವರ,ಗಿರೀಶ್ ಪೂಜಾರ,ಬಸವರಾಜ ಭಜಂತ್ರಿ, ಬಸು ಹಿರೇಮಠ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.