ಧಾರವಾಡ –
ಧಾರವಾಡದಲ್ಲಿ ಬೆಳ್ಳಂ ಬೆಳಿಗ್ಗೆ ಪುಟ್ ಪಾತ್ ಕಾರ್ಯಚರಣೆ ಮಾಡಲಾಗಿದೆ.

ಸಾರ್ವಜನಿಕರು ಸಂಚಾರ ಮಾಡುವ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ನಗರದ ಹಲವೆಡೆ ಪುಟ್ ಪಾತ್ ಒತ್ತುವರಿ ಮಾಡಿಕೊಂಡವರಿಗೆ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಸಂಚಾರಿ ಪೊಲೀಸರ ಮತ್ತು ಶಹರ ಪೊಲೀಸ್ ಠಾಣೆ ಪೊಲೀಸರ ನೇತ್ರತ್ವದಲ್ಲಿ ಒತ್ತುವರಿ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಿ ತೆರುವು ಮಾಡಿದ್ದಾರೆ.

ನಗರದ ಆಜಾದ್ ರಸ್ತೆ, ಧಾರವಾಡದ ಮಹಾನಗರ ಪಾಲಿಕೆಯ ವೃತ್ತ, ಸೂಪರ್ ಮಾರುಕಟ್ಟೆ, ನೆಹರು ಮಾರುಕಟ್ಟೆ ಸೇರಿದಂತೆ ಎಲ್ಲೆಂದರಲ್ಲಿ ಸಾರ್ವಜನಿಕರ ಜಾಗೆಯನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ಮೈ ನಡುಗುವ ಚಳಿಯಲ್ಲಿ ಚಳಿ ಬೀಡಿಸಿದ್ದಾರೆ.

ಈ ಕುರಿತಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಎಚ್ಚೇತ್ತುಕೊಂಡ ಪಾಲಿಕೆಯ ಅಧಿಕಾರಿಗಳು ಇಂದು ಬೆಳ್ಳಂ ಬೆಳಿಗ್ಗೆ ಕಾರ್ಯಾಚರಣೆ ಮಾಡಿ ಪುಟ್ ಪಾತ್ ನ್ನು ತೆರುವುಗೊಳಿಸಿದ್ದಾರೆ.

ಸಾರ್ವಜನಿಕರಿಗೆ ಸಂಚಾರ ಮಾಡಲು ತೊಂದರೆ ಹಾಗೇ ಪಾರ್ಕಿಂಗ್ ಸಮಸ್ಯೆ ಜೊತೆಗೆ ಇದರಿಂದ ಸಂಚಾರ ಅಸ್ಥವ್ಯಸ್ಥತೆ ಉಂಟಾಗುತ್ತಿತ್ತು ಇದನ್ನು ಸಾರ್ವಜನಿಕರು ಪಾಲಿಕೆಯ ಅಧಿಕಾರಿಗಳಿಗೆ ಗಮನಕ್ಕೆ ತಗೆದುಕೊಂಡು ಬಂದಿದ್ದರು.

ಇದನ್ನು ಗಂಭೀರವಾಗಿ ತಗೆದುಕೊಂಡ ಪಾಲಿಕೆಯ ಹಿರಿಯ ಅಧಿಕಾರಿಗಳಾದ ಆರ್ ಎಮ್ ಕುಲಕರ್ಣಿ ACP ಅನುಷಾ ಅವರು ಮತ್ತು ಸಂಚಾರಿ ಪೊಲೀಸ್ ಇನಸ್ಪೇಕ್ಟರ್ ಮಲಗೌಡ ನಾಯ್ಕರ್ ,ಶಹರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀಧರ್ ಸತಾರೆ, ನೇತ್ರತ್ವದಲ್ಲಿ ಪುಟ್ ಪಾತ್ ತೆರುವು ಕಾರ್ಯಾಚರಣೆ ನಡೆಯಿತು.

ನಗರದ ಮುಖ್ಯವಾಗಿ ಮಾರುಕಟ್ಟೆ ಪ್ರದೇಶದಲ್ಲಿ ಪುಟ್ ಪಾತ್ ನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಿದ್ದ ವ್ಯಾಪಾರಿಗಳನ್ನು ತೆರುವುಗೊಳಿಸಲಾಗಿದೆ.

ಇದರೊಂದಿಗೆ ಪುಟ್ ಪಾತ್ ನ್ನು ಒತ್ತುವರಿ ಮಾಡಿಕೊಂಡಿದ್ದನ್ನು ತೆರುವು ಮಾಡಿದ್ದಾರೆ. ಇನ್ನೂ ಈ ಒಂದು ತೆರುವು ಕಾರ್ಯಾಚರಣೆಯಲ್ಲಿ ಪಾಲಿಕೆಯ ಅಧಿಕಾರಿಗಳಾದ ಆರ್ ಎಮ್ ಕುಲಕರ್ಣಿ,ನವೀನ್,ಉಷಾ,ಮ್ಯಾಗೇರಿ,ಶಿರಕೋಳ,ಸೇರಿದಂತೆ ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.

ಇನ್ನೂ ಪಾಲಿಕೆಯ ಅಧಿಕಾರಿಗಳೊಂದಿಗೆ ಧಾರವಾಡ ಉಪ ವಿಭಾಗದ ACP ಅನುಷಾ ಅವರೊಂದಿಗೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಿಂದಲೂ ಇನಸ್ಪೇಕ್ಟರ್ ಮಲಗೌಡ ನಾಯ್ಕರ್, ಎಎಸ್ಐ ಅಧಿಕಾರಿಗಳಾದ ಎಮ್ ಎ ,ನಮಾಜೆ ಬಸವರಾಜ ಕುರಿ,

ಸಿಬ್ಬಂದಿಗಳಾದ ಬಸಯ್ಯ ಸುತಗತ್ತಿಮಠ,ಈರಣ್ಣಾ ಕವಳಿ,ಮಂಜುನಾಥ ಗದ್ದಿಕೇರಿ, ಅಲಿ ಹಾಡ್ಕರ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಇತ್ತ ಶಹರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀಧರ್ ಸತಾರೆ,ಸೇರಿದಂತೆ ಹಲವು ಸಿಬ್ಬಂದಿ ಗಳು ಈ ಒಂದು ಕಾರ್ಯಾಚರಣೆಗೆ ಭದ್ರತೆ ನೀಡಿದರು.