ಧಾರವಾಡ –
ಶುಚಿಯೊಂದಿಗೆ ರುಚಿಗೆ ಹೆಸರಾಗಿರುವ ಧಾರವಾಡ ದ ಪ್ರಸಿದ್ಧ ಬಿಗ್ ಮಿಶ್ರಾ ಈಗ ನೂತನ ವಾಗಿ ಎರಡು ಸೇವೆಗಳನ್ನು ಆರಂಭ ಮಾಡಿದೆ ಹೌದು ಈಗಾಗಲೇ ಧಾರವಾಡ ದ ಹೊರವಲಯದ ಹೆದ್ದಾರಿಯಲ್ಲಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಒಂದೇ ಸೂರಿ ನಡಿ ವೆರೈಟಿ ವೆರೈಟಿ ತಿಂಡಿ ತಿನಿಸುಗಳನ್ನು ನೀಡುತ್ತಿರುವ ಈ ಒಂದು ಸ್ಥಳದಲ್ಲೇ ಹೊಸದಾಗಿ ಎರಡು ಥಾಲಿ ಗಳು ಆರಂಭಗೊಂಡಿವೆ
ಸಂಜಯ ಮಿಶ್ರಾ ಮಾಲಿಕತ್ವದ ಈ ಒಂದು ಮಳಿಗೆ ಯಲ್ಲಿ ಸಧ್ಯ ಮತ್ತೆರೆಡು ಹೊಸ ಥಾಲಿ ಗಳನ್ನು ಆರಂಭ ಮಾಡಲಾಗಿದೆ.ಯರಿಕೋಪ್ಪ ದಲ್ಲಿನ ಬಿಗ್ ಮಿಶ್ರಾ ಕೆಫೆ ನಲ್ಲಿ ಗ್ರಾಹಕರಿ ಗಾಗಿ ಇನ್ನಷ್ಟು ಹೊಸ ಸೇವೆಗಳು 25 ಮೇ ರಿಂದ ಲಭ್ಯ ಎಂದು ಬಿಗ್ ಮಿಶ್ರಾ ಪೇಡೆಯ ಶ್ರೀಧರ ಬೋರಕ ತಿಳಿಸಿದರು
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು
ಸಿಹಿ ತಿನಿಸು, ನಮಕೀನ ಮತ್ತು ಬೇಕರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ ‘ಬಿಗ್ ಮಿಶ್ರಾ ಪೇಡೆ’ಯೂ ಕಳೆದ ಅಕ್ಟೋಬರನಲ್ಲಿ ಹೋಟೆಲ್ ಉದ್ಯಮಕ್ಕೆ ಎಂಟ್ರಿ ಕೊಟ್ಟು ಹುಬ್ಬಳ್ಳಿ ಧಾರವಾಡ ಬೆ ಪಾಸ್ ನಲ್ಲಿ ಟೋಲ ಪ್ಲಾಝಾ ಬಳಿ ಯರಿಕೊಪ್ಪನಲ್ಲಿ 10 ಎಕ ವಿಸ್ತೀರ್ಣದ ಪ್ರದೇಶದಲ್ಲಿ “ಬಿಗ್ ಮಿಶ್ರಾ” ದ ಸುಸಜ್ಜಿತ ಮತ್ತು ಶುಚಿಯಾದ ಸಸ್ಯಾಹಾರಿ ಊಟ ಮತ್ತು ಉಪಹಾರ ಗೃಹವನ್ನು ಆರಂಭಿಸಿತು.
ಹೆದ್ದಾರಿ ಯಲ್ಲಿ ಸಂಚರಿಸುವ ಪುಯಾಣಿಕರ ಅವಶ್ಯ ಕತೆಗಳನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿರುವ ಬಿಗ್ ಮಿಶ್ರಾ ಕಥೆಗೆ ಸಿಕ್ಕ ಗ್ರಾಹಕರ ಉತ್ತಮ ಸ್ಪಂದನೆ ಯನ್ನು ಗಮನಿಸಿ ” ಬಿಗ್ ಮಿಶ್ರಾ ಕೆಫೆ”ಯಲ್ಲಿ ಮತ್ತಷ್ಟು ಹೊಸ ಸೇವೆಗಳನ್ನು ಪರಿಚಯಿಸಲಾಗುತ್ತಿದೆ ಎಂದರು.
ಬಿಗ್ ಮಿಶ್ರಾ ಕೆಫೆ ಯಲ್ಲಿ ಎಲ್ಲಾ ಸಿಹಿ ಮತ್ತು ನಮಕೀನ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಯೊಂದಿಗೆ ದಕ್ಷಿಣ ಭಾರತೀಯ ಉತ್ತರ ಭಾರತೀಯ ಊಟ ಹಾಗೂ ಉಪಹಾರಗಳು ಈಗಾಗಲೇ ಇಲ್ಲಿ ಗ್ರಾಹಕರಿಗೆ ಲಭ್ಯವಿವೆ ಮತ್ತು ಇದೇ 25 ಮೇ ರಿಂದ ವಿಶೇಷವಾದ ಸ್ವಾದಿಷ್ಟ “ರಾಜಸ್ತಾನಿ ಥಾಲಿ” ಹಾಗೂ ಉತ್ತರ ಕರ್ನಾಟಕದ ರುಚಿಕರ “ಜೋಳದ ರೊಟ್ಟಿ, ಥಾಲಿ”ಗಳನ್ನು ಗ್ರಾಹಕರ ಸೇವೆಗಾಗಿ ಆರಂಭಿಸಲಿದ್ದೇವೆ.
ಅಲ್ಲದೆ ಬೆಳಿಗ್ಗೆ 7 ಘಂಟೆಯಿಂದ 11 ಘಂಟೆಯ ವರೆಗೆ ಅನೇಕ ಬಗೆಯ ಪರಾಠಾಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆರಂಭಿಸುತ್ತಿದ್ದೇವೆ.ಇಲ್ಲಿ “ಬಿಗ್ ಮಿಶ್ರಾ ಪೇಡ”ಯನ್ನು ಗ್ರಾಹಕರ ಎದುರಿನಲ್ಲಿಯೇ ತಯಾರಿ ಸುವ ‘ಲೈವ್ ಪೇಡಾ ಸೆಂಟರ ಇದ್ದು ಗ್ರಾಹಕರ ಎದುರಿ ನಲ್ಲಿ ತಾಜಾ ಪೇಡೆಗಳನ್ನು ತಯಾರಿಸಿ ಕೊಡಲಾಗುತ್ತಿದ್ದು
ಗ್ರಾಹಕರು ಇದರ ರುಚಿಯನ್ನು ಸವಿಯುತ್ತಿದ್ದಾರೆ. ಇವು ಗಳ ಜೊತೆಗೆ ಇಲ್ಲಿನ ಬೇಕರಿ ವಿಭಾಗದಲ್ಲಿ ವಿವಿಧ ಬಗೆಯ ಕುಕಿ ಹಾಗೂ ಕೇಕಗಳು ಸಹ ದೊರೆಯುತ್ತಿವೆ. ಚಾಟ ಸೆಂಟರನಲ್ಲಿ 20ಕ್ಕೂ ಹೆಚ್ಚು ವಿವಿಧ ಬಗೆಯ ಚಾಟಗಳು, ಜೂಸ್ ಸೆಂಟರನಲ್ಲಿ ತಾಜಾ ಹಣ್ಣಿನ ರಸಗಳು, ಮತ್ತು ಆಯಿಸ ಕ್ರೀಂ ಸೆಂಟರನಲ್ಲಿ ವಿವಿಧ ಬಗೆಯ ಆಯಿಸ ಕ್ರೀಂ ಗ್ರಾಹಕರ ಮನವನ್ನು ತಣಿಸು ತ್ತಿದೆ
“ಬಿಗ್ ಮಿಶ್ರಾ ಕೆಫೆ ಬೆಳಗಾವಿ, ಗೋವಾ ಭಾಗದಿಂದ ಬೆಂಗಳೂರು ಹಾಗೂ ಬೆಂಗಳೂರು ಭಾಗದಿಂದ ಮುಂಬಯಿ, ಪುಣ, ಗೋವಾ ಭಾಗಕ್ಕೆ ಪುಯಾಣಿಸುವ ಪುವಾಸಿಗರ ನೆಚ್ಚಿನ ಆಯ್ಕೆಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳನ್ನು ಒದಗಿಸುವು ದಕ್ಕೆ ಬಿಗ್ ಮಿಶ್ರಾ ಆಡಳಿತ ವರ್ಗ ಕಟ್ಟಿ ಬದ್ರವಾಗಿದೆ ಎಂದರು .
ಪತ್ರಿಕಾಗೋಷ್ಟಿಯಲ್ಲಿ,ಶ್ರೀಧರ ಶಟ್ಟಿ,ಯೋಗೇಶ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ……