ಬಳ್ಳಾರಿ –
ರಮೇಶ ಜಾರಕಿಹೊಳಿ ಬೆನ್ನಲ್ಲೇ ಇನ್ನೂ ವಿವಿಧ ಪಕ್ಷಗಳ 19 ಮುಖಂಡರ ಇಂತಹ ಲೈಂಗಿಕ ಹಗರಣಗಳ ಸಿಡಿಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಹೇಳಿದ್ದಾರೆ.ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 19 ರಾಜಕೀಯ ನಾಯಕರ ಲೈಂಗಿಕ ಹಗರಣಗಳ ವಿಡಿಯೋ ಬಿಡುಗಡೆ ಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಕೆಲವರು ಸಿಡಿಗಳನ್ನು ಸಿದ್ಧಪಡಿಸಿಕೊಂಡಿರುವುದು ಗೊತ್ತಾಗಿದೆ. ಎರಡು ದಿನದ ಹಿಂದೆ ಸಿಡಿ ಬಿಡುಗಡೆ ನೇತೃತ್ವ ವಹಿಸುವಂತೆ ಒಬ್ಬರು ಕರೆ ಮಾಡಿದ್ದರು. ಆದರೆ, ನಾನು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದೆ. ರಾಜಕಾರಣಿ ಗಳನ್ನು ಇಂತಹ ಪ್ರಕರಣದಲ್ಲಿ ಸಿಲುಕಿ ಬ್ಲಾಕ್ ಮೇಲ್ ಮಾಡುವ ಕೆಲವರು ಇದ್ದಾರೆ.ರಮೇಶ್ ಜಾರಕಿಹೊಳಿ ಅವರ ವಿಡಿಯೋ ಬಿಡುಗಡೆ ಹಿಂದೆ ರಾಜಕೀಯ ಪಕ್ಷದ ಕೈವಾಡವಿದೆ. ಮಾಜಿ ಮುಖ್ಯ ಮಂತ್ರಿಯೊಬ್ಬರು ವಾರಕ್ಕೊಮ್ಮೆ ಕೇರಳದ ವಯ ನಾಡಿಗೆ ಭೇಟಿ ನೀಡುತ್ತಾರೆ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಪ್ರಕರಣದಲ್ಲಿ ಸಂತ್ರಸ್ತೆ ದೂರು ನೀಡಿಲ್ಲ. ಅವರ ಕುಟುಂಬದವರು ಕೂಡ ದೂರು ನೀಡಿಲ್ಲ. ಸಂತ್ರಸ್ತೆ ಮತ್ತು ಅವರ ಕುಟುಂಬದವರು ದೂರು ನೀಡಿದರೆ ಕ್ರಮಕೈಗೊ ಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.