ಹುಬ್ಬಳ್ಳಿ –
ಕಸವನ್ನು ಸ್ವಚ್ಚಗೊಳಿಸದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರುದ್ದ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಹೌದು ಈಗಾಗಲೆ ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ರಜತ್ ಅಭಿಯಾನವನ್ನು ಮಾಡುತ್ತಿರುವ ಇವರು ಇಂದು ಬೆಳಿಗ್ಗೆ ನಗರದ ವಾರ್ಡ್ ನಂಬರ್ 54 ರ ಹೆಗ್ಗೆರಿಯ ಕೋಳಗೆರಿ ಪ್ರದೇಶದಲ್ಲಿ ಮನೆ ಮನೆಗೆ ತೆರಳುವಾಗ ರಸ್ತೆ ಮೇಲೆ ಬಿದ್ದಿರುವ ಕಸವನ್ನು ಗಮನಿಸಿ ಮಹಾನ ಗರ ಪಾಲಿಕೆಯ ವಿರುದ್ದ ಅಸಮಾಧಾನ ವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ 6 ತಿಂಗಳಿನಿಂದ ನಾಲಾದಿಂದ ಕಸವನ್ನು ತಗೆದು ರಸ್ತೆಯಲ್ಲಿಯೇ ಹಾಕಿದ್ದಾರೆ.ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ಸಾರ್ವಜನಿಕರಿಗೆ ತೊಂದರೆ ಯಾಗಿದ್ದು ಹೀಗಾಗಿ ಈ ಕಸವನ್ನು ಈ ಕೂಡಲೇ ಸ್ವಚ್ಚಗೊಳಿಸಬೇಕು 6 ಗಂಟೆಗಳ ಸಮಯವನ್ನು ನೀಡಿದ್ದೇನೆ ಸ್ವಚ್ಚಗೊಳಿಸದಿದ್ದರೆ ನಾನೇ ನನ್ನ ಸ್ವಂತ ಖರ್ಚಿನಿಂದ ಇದನ್ನು ತಗೆದುಕೊಕೊಂಡು ಮಹಾನಗರ ಪಾಲಿಕೆಯ ಕಚೇರಿ ಮುಂದೆ ಹಾಕುತ್ತೇನೆ ಎಂದು ಹೇಳಿ ಎಚ್ಚರಿಕೆಯ ಸಂದೇ ಶವನ್ನು ನೀಡಿದ್ದಾರೆ.
ಇದರೊಂದಿಗೆ ಕೈ ಪಕ್ಷದ ಯುವ ಮುಖಂಡ ಡೆಡ್ ಲೈನ್ ನೀಡಿದ್ದಾರೆ. ನಿಮ್ಮ ಕಚೇರಿ ಮುಂದೆ ಕಸ ವನ್ನು ತಗೆದುಕೊಂಡು ಬರತ್ತೇನೆ ಇದು ನಿಮಗೆ ಎಚ್ಚರಿಕೆಯ ಸಂದೇಶ ಎಂದು ಮಾತನಾಡಿ ವಿಡಿಯೋ ಮೂಲಕ ಪಾಲಿಕೆಯ ಅಧಿಕಾರಿಗಳಿಗೆ 6 ಗಂಟೆ ಸಮಯವನ್ನು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.