ಧಾರವಾಡ –
ಧಾರವಾಡದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ,ಪ್ರಾದೇಶಿಕ ಕೇಂದ್ರ ಸಿಡಾಕ್ ಆವರಣ ಬೇಲೂರು ಕೈಗಾರಿಕಾ ಪ್ರದೇಶ ಧಾರವಾಡದ ಕಚೇರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪರಿಣಿತ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಂದ್ರ ದೇಸಾಯಿ ದಿ.14-05-21ರಂದು ನಿಧನ ರಾಗಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಲಾಕ್ ಡೌನ್ ಹಿನ್ನಲೆಯಲ್ಲಿ ಸದರಿಯವರು ತಮ್ಮ ಸ್ವಂತ ಊರಾದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂ ಕಿನ ಕುಳ್ಳೂರು ಗ್ರಾಮದಲ್ಲಿದ್ದ ಅವರಿಗೆ ಕಳೆದ ಮೂರು ನಾಲ್ಕು ದಿನಗಳಿಂದ ಉಸಿರಾಟದ ಸಮಸ್ಯೆ ಎದುರಾಗಿತ್ತು. ಚಿಕಿತ್ಸೆಗಾಗಿ ರಾಮದುರ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ನಿನ್ನೆ ಚಿಕಿತ್ಸೆ ಫಲಿಸ ದೇ ಮೃತರಾಗಿದ್ದಾರೆ.

ಕಚೇರಿಯಲ್ಲಿ ಎಲ್ಲರೊಂದಿಗೆ ಒಳ್ಳೆಯ ಒಡನಾಟ ವನ್ನು ಹೊಂದಿದ್ದ ಅವರು ಮಾನವೀಯ ಗುಣಗಳ ನ್ನು ಮೈಗೂಡಿಸಿಗೊಂಡು ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಭಾಜನರಾಗಿದ್ದರು.ಗ್ರಾಮೀಣಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ವಿಷಯದಲ್ಲಿ ಅಪಾರ ಅನುಭವ ಜ್ಞಾನ ಹಾಗೂ ತಮ್ಮದೆಯಾದ ವಿಶೇಷ ಶೈಲಿಯಿಂದ ಭೋಧನೆಯಲ್ಲಿ ನೈಪುಣ್ಯತೆ ಹೊಂದಿದ್ದು ಸಂಸ್ಥೆಯ ವತಿಯಿಂದ ಅನೇಕ ತರಬೇತಿಗಳನ್ನು ಯಶಸ್ವಿಯಾ ಗಿ ನಿರ್ವಹಿಸಿ ಅಪಾರ ಜನಮನ್ನಣೆ ಪಡೆದಿದ್ದರು ರಾಜೇಂದ್ರ ದೇಸಾಯಿ ದೈವಾಧೀನರಾಗಿರುವ ಸುದ್ದಿ ತಿಳಿದ ಕಚೇರಿಯ ಎಲ್ಲಾ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ. ಸಂಸ್ಥೆಯ ನಿರ್ದೇಶಕರು,ಉಪ ನಿರ್ದೇಶಕರು, ಬೋಧಕರು ಆಡಳಿತ ಮತ್ತು ಲೆಕ್ಕಾಧಿ ಕಾರಿಗಳು ಹಾಗೂ ಕಚೇರಿಯ ಎಲ್ಲಾ ಸಿಬ್ಬಂದಿಗಳು ಅವರ ಒಡನಾಟ ಸ್ಮರಿಸುತ್ತ ಭಾವಪೂರ್ಣ ನಮನ ದೊಂದಿಗೆ ಸಂತಾಪವನ್ನು ಸೂಚಿಸಿದ್ದಾರೆ.ಅವರಿಲ್ಲದ ಕುಟುಂಬಕ್ಕೆ ದುಖಃವನ್ನು ತಡೆದುಕೊಳ್ಳುವ ಶಕ್ತಿಯ. ನ್ನು ಆ ದೇವರು ನೀಡಲೆಂದು ಹಾಗೂ ಅವರ ಮನೆ ಯವರಿಗೆ, ಬಂಧುಗಳಿಗೆ ಮತ್ತು ಸ್ನೇಹಿತರಿಗೆ ದುಖಃ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.