ವಾರ್ಡ್ 16 ರಲ್ಲಿ BJP ಅಭ್ಯರ್ಥಿ ರಾಜೇಶ್ವರಿ ಸಾಲಗಟ್ಟಿ ಅವರೇ ಈ ಬಾರಿ ಎನ್ನುತ್ತಿದ್ದಾರೆ ಮತದಾರರು

Suddi Sante Desk

ಧಾರವಾಡ –

ಹೊಸ ಕನಸು ಹೊಸ ಬದಲಾವಣೆ ಬಯಸಿ ಧಾರವಾಡದ ವಾರ್ಡ್ 16 ರಲ್ಲಿ BJP ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧೆ ಮಾಡಿರುವ ರಾಜೇಶ್ವರಿ ಸಾಲಗಟ್ಟಿ ಪರ ಸಾಕಷ್ಟು ಪ್ರಮಾಣದಲ್ಲಿ ಗೆಲುವಿಗೆ ಅಲೆ ಕಂಡು ಬರುತ್ತಿದೆ.

ಹೌದು ಕ್ಷೇತ್ರದಲ್ಲಿ ಈವರೆಗೆ ಪಕ್ಷದಿಂದ ಅದರಲ್ಲೂ ಶಾಸಕರು,ಸಂಸದರಿಂದ ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಇಟ್ಟು ಹಾಗೇ ಹೊಸ ಹೊಸ ಕನಸು ಯೋಜನೆ ಗಳನ್ನು ಹೇಳುತ್ತಾ ಮತಯಾಚನೆ ಮಾಡುತ್ತಿದ್ದಾರೆ.

ವಾರ್ಡ್ ನ ಹಲವೆಡೆ ಸೂರ್ಯ ಉದಯಿಸುವ ಮುನ್ನವೇ ಪ್ರಚಾರ ಆರಂಭಿಸಿ ಮತಯಾಚನೆ ಮಾಡುತ್ತಿದ್ದು ಇಂದು ಕೂಡಾ ಬಿಡುವಿಲ್ಲದೆ ಪ್ರಚಾರವನ್ನು ಮಾಡಿ ಮತಯಾಚನೆ ಮಾಡಿದರು

ವಾರ್ಡ್ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು ಇನ್ನೂ ಪ್ರಮುಖವಾಗಿ ಕಳೆದ ಮೂರು ನಾಲ್ಕು ದಿನಗಳಿಂದಲೂ ವಾರ್ಡ್ ನಲ್ಲಿ ಪ್ರಚಾರಕ್ಕೆ ಹೋದ ಸಮಯದಲ್ಲಿ ಸಾರ್ವಜನಿಕರಿಂದ ಸಾಕಷ್ಟು ಪ್ರಮಾಣದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ

ಇದರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಪ್ರಚಾರ ಜೋರಾಗಿದ್ದು ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ ರಾಜೇಶ್ವರಿ ಸಾಲಗಟ್ಟಿ ಅವರು.ಬೆಳ್ಳಂ ಬೆಳಿಗ್ಗೆ ಪಕ್ಷದ ಕಾರ್ಯಕ ರ್ತರು ಮುಖಂಡರು ಹಾಗೇ ಮಹಿಳಾ ಮುಖಂಡ ರೊಂದಿಗೆ ಮನೆ ಮನೆಗೆ ತೆರಳಿ ಭರ್ಜರಿಯಾಗಿ ಮತಯಾಚನೆ ಮಾಡಿದರು.

ವಾರ್ಡ್ ನ ಹಲವು ಬಡಾವಣೆಗಳಲ್ಲಿ ಬಿಡುವಿಲ್ಲದೇ ಮನೆ ಮನೆಗೆ ತೆರಳಿ ಕ್ಯಾಂಪೇನ್ ಮಾಡಿದರು. ಹಲವು ಬಡಾವಣೆಗಳಲ್ಲಿನ ಮನೆ ಮನೆಗೆ ತೆರಳಿ ಪ್ರಚಾರದೊಂದಿಗೆ ಈಗಾಗಲೇ ಬಿಜೆಪಿ ಪಕ್ಷದ ಶಾಸಕರು ಈ ಹಿಂದೆ ವಾರ್ಡ್‌ ನಲ್ಲಿ ಮಾಡಿದ ಕೆಲಸ ಕಾರ್ಯಗಳನ್ನು ಹೇಳುತ್ತಾ ಇದರೊಂದಿಗೆ ಮತ ಯಾಚನೆ ಮಾಡುತ್ತಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.