ಹುಬ್ಬಳ್ಳಿ –
ಚಿಗರಿ ಬಸ್ ಸಮಸ್ಯೆ ಮತ್ತು ಚಾಲಕರು ಅನುಭವಿಸುತ್ತಿರುವ ಉಸಿರುಗಟ್ಟಿದ ವಾತಾವರಣ ವಿರುದ್ಧ ಯುವ ಮುಖಂಡ ರಾಜು ನಾಯಕವಾಡಿ ಧ್ವನಿ ಎತ್ತಲಿದ್ದಾರೆ ಹೌದು ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ನಲ್ಲಿ ನೂರೆಂಟು ಸಮಸ್ಯೆ ಗಳಿವೆ
ಅದರಲ್ಲೂ ಡಿಸಿಯಾಗಿ ಹೊಸದಾಗಿ ಬಂದಿರುವ ಸಿದ್ದಲಿಂಗಯ್ಯ ಅವರ ಒಂದಲ್ಲ ಒಂದು ಶಿಕ್ಷೆ ಯಿಂದಾಗಿ ಚಾಲಕರಿಗೆ ಸಧ್ಯ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದ್ದು ಕರ್ತವ್ಯ ಮಾಡಲು ಪ್ರತಿದಿನ ಚಾಲಕರು ಹಿಂದೇಟು ಹಾಕುವ ಪರಿಸ್ಥಿತಿ ಕಂಡು ಬರುತ್ತಿದೆ ಈ ನಡುವೆ ಮೇಲಾಧಿಕಾರಿಗಳು ಗೊತ್ತಿದ್ದರು ಕಂಡರು ಕಾಣದಂತೆ ಇದ್ದು ಸಧ್ಯ ಚಾಲಕರ ಸಮಸ್ಯೆ ಗಳಿಗೆ ರಾಜು ನಾಯಕವಾಡಿ ಧ್ವನಿ ಆಗುತ್ತಿದ್ದಾರೆ
ಸದಾ ಒಂದಿಲ್ಲೊಂದು ಸಾರ್ವಜನಿಕರ ಸಮಸ್ಯೆ ಕುರಿತು ಧ್ವನಿ ಎತ್ತುತ್ತಾ ಹೋರಾಟದ ಮೂಲಕ ಧ್ವನಿಯಾಗುತ್ತಿರುವ ರಾಜು ನಾಯಕವಾಡಿ ಯವರು ಸಧ್ಯ ಚಿಗರಿ ಬಸ್ ಸಮಸ್ಯೆ ಮತ್ತು ಚಾಲಕರ ಸಮಸ್ಯೆ ಗಳ ಕುರಿತು ಹೋರಾಟದ ಅಖಾಡಕ್ಕೆ ಇಳಿಯಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..