ಗೋಕಾಕ –
ಕಳೆದೆರಡು ವರ್ಷಗಳಿಂದ ಶಾಲೆಗಳ ಸರಿಯಾಗಿ ನಡೆ ಯದೇ ಶಿಕ್ಷಣ ವ್ಯವಸ್ಥೆಯಲ್ಲಿ ಕುಂಠಿತವಾಗಿದೆ.ಸಧ್ಯ ರಜೆ ಮುಗಿಸಿಕೊಂಡು ಶಾಲೆಗಳತ್ತ ಮಕ್ಕಳು ಮುಖ ಮಾಡಿದ್ದು ಇನ್ನೂ ಇದನ್ನು ಗಮನದಲ್ಲಿಟ್ಟುಕೊಂಡು ಶಾಸಕ ರಮೇಶ್ ಜಾರಕಿಹೊಳಿ ಖುದ್ದಾಗಿ ಕ್ಷೇತ್ರದ ಸುಮಾರು 30 ಸಾವಿರ ಮಕ್ಕಳ ಮನೆಗಳಿಗೆ ಪತ್ರ ಬರೆದಿದ್ದಾರೆ.ಹೌದು ರಾಜಕೀ ಯದ ನಡುವೆಯೂ ಕೂಡಾ ಶಾಸಕ ರಮೇಶ ಜಾರಕಿ ಹೊಳಿ ಅವರ ಶೈಕ್ಷಣಿಕ ಕಾಳಜಿಗೆ ಶಿಕ್ಷಣ ಇಲಾಖೆ ಕೂಡ ತುಂಬಾ ಸಂತಸವ್ಯಕ್ತಪಡಿಸಿದೆ.

ಗೋಕಾಕ್ ಮತಕ್ಷೇತ್ರದ ಆತ್ಮೀಯ ಪಾಲಕ ಬಂಧುಗಳೆ ನಿಮಗೆಲ್ಲ ಪ್ರೀತಿಯ ನಮಸ್ಕಾರಗಳು.ಶಿಕ್ಷಣ ಇಲಾಖೆ ಮಕ್ಕಳ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಿದೆ.ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗಬೇಕು.ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು.ಒಂದು ದಿನ ಅವರೆಲ್ಲ ನಾಡಿಗೆ ಶಕ್ತಿಯಾಗಬೇಕು ಎಂದು ಕನಸು ಕಂಡಿದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವದು ನಮ್ಮೆಲ್ಲರ ಜವಾಬ್ದಾರಿ,ಕಳೆದೆರಡು ವರ್ಷಗಳಲ್ಲಿ ಕೊರೋನಾ ದಿಂದಾಗಿ ಮಕ್ಕಳ ಕಲಿಕೆ ಹಿಂದುಳಿದಿರಬಹುದು.ಈ ವರ್ಷ ಮೇ 16ರಂದು ಶಾಲೆಗಳು ಪ್ರಾರಂಭವಾಗಿದ್ದು ಎರಡು ವರ್ಷದ ಕಲಿಕಾ ಕೊರತೆ ನೀಗಿಸಲು ಶಿಕ್ಷಣ ಇಲಾಖೆ ಪ್ರಯತ್ನ ಪಡುತ್ತಿದೆ.ಶೈಕ್ಷಣಿಕ ವಲಯದ ಗುರುಬಳಗ ಕಾಳಜಿ ಮಾಡಿ ಶಿಕ್ಷಣ ನೀಡುವದನ್ನು ಖುದ್ದಾಗಿ ಪರಿಶೀಲಿ ಸುತ್ತಿದ್ದೆನೆ ಹೀಗಾಗಿ ತಪ್ಪದೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೊಡಿ ಎಂದು ಉಲ್ಲೇಖ ಮಾಡಿ ಬರೆದಿದ್ದಾರೆ