ಧರ್ಮಶಾಲಾ –
ಪಂಜಾಬ್ ಗೆ 242 ಗುರಿ ನೀಡಿದ RCB ಶತಕವಂಚಿತರಾದ ವಿರಾಟ್,ಭರ್ಜರಿ ಬ್ಯಾಟಿಂಗ್ ಮಾಡಿದ RCB ಆಟಗಾರರು ಹೌದು
ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಎದುರಿನ ಪಂಧ್ಯದಲ್ಲಿ RCB ಟೀಮ್ 242 ಗುರಿಯನ್ನು ನೀಡಿದೆ.ಹೌದು ಧರ್ಮಶಾಲಾದಲ್ಲಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡವು RCB ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು.ಹಿಮಾಚಲ ಪ್ರದೇಶದ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಲು ಆರಂಭ ಮಾಡಿದ ಆರ್‌ಸಿಬಿ ತಂಡವು ಆರಂಭದಲ್ಲೇ ನಾಯಕ ಫಾಫ್ ಡು ಪ್ಲೆಸಿಸ್(9) ಹಾಗೂ ವಿಲ್ ಜ್ಯಾಕ್ಸ್(12) ವಿಕೆಟ್ ಕಳೆದುಕೊಂಡಿತು.
ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರ ವಿದ್ವತ್ ಕಾವೇರಪ್ಪ ಈ ಇಬ್ಬರು ಬ್ಯಾಟರ್ ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾ ದರು ಈ ವೇಳೆಗೆ 4.4 ಓವರ್‌ಗಳಲ್ಲಿ ಆರ್‌ಸಿಬಿ ಸ್ಕೋರ್ ಎರಡು ವಿಕೆಟ್ ನಷ್ಟಕ್ಕೆ 43 ರನ್ ಆಗಿತ್ತು.ಪವರ್ ಪ್ಲೇನೊಳಗೆ ಎರಡು ಪ್ರಮುಖ ವಿಕಟ್ ಕಳೆದುಕೊಂಡ ಆರ್‌ಸಿಬಿ ತಂಡಕ್ಕೆ ಮೂರನೇ ವಿಕೆಟ್‌ಗೆ ರಜತ್ ಪಾಟೀದಾರ್ ಹಾಗೂ ವಿರಾಟ್ ಕೊಹ್ಲಿ ಆಸರೆಯಾದರು.
ಆರಂಭದಿಂದಲೇ ಪಂಜಾಬ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ರಜತ್ ಪಾಟೀದಾರ್ ಕೇವಲ 21 ಎಸೆತಗಳನ್ನು ಎದುರಿಸಿ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 4ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.ಮೂರನೇ ವಿಕೆಟ್‌ಗೆ ಕೊಹ್ಲಿ-ಪಾಟೀದಾರ್ ಜೋಡಿ ಕೇವಲ 32 ಎಸೆತಗಳನ್ನು ಎದುರಿಸಿ 76 ರನ್‌ಗಳ ಜೊತೆ ಯಾಟವಾಡಿದರು.ಅಂತಿಮವಾಗಿ ಪಾಟೀದಾರ್ 23 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 55 ರನ್ ಬಾರಿಸಿ ಸ್ಯಾಮ್ ಕರ್ರನ್‌ಗೆ ವಿಕೆಟ್ ಒಪ್ಪಿಸಿದರು.
ಮೊದಲ 10 ಓವರ್ ಅಂತ್ಯಕ್ಕೆ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು 119 ರನ್ ಬಾರಿಸಿತು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಪಂಜಾಬ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಕೊಹ್ಲಿ ಕೇವಲ 47 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 92 ರನ್ ಬಾರಿಸಿ ಆರ್ಶದೀಪ್ ಸಿಂಗ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು.
ಇನ್ನು ಇದೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 600+ ರನ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂ ಡರು ಇದರ ಜತೆ ಪಂಜಾಬ್ ಎದುರು 1000 ರನ್ ಸಿಡಿಸಿದ ಸಾಧನೆಯನ್ನು ಕೊಹ್ಲಿ ಮಾಡಿದರು
ಇನ್ನು ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಕ್ಯಾಮರೋನ್ ಗ್ರೀನ್ 5ನೇ ವಿಕೆಟ್‌ಗೆ 46 ಎಸೆತಗಳನ್ನು ಎದುರಿಸಿ 92 ರನ್‌ಗಳ ಜತೆಯಾಟ ನಿಭಾಯಿಸಿದರು.ಗ್ರೀನ್ 27 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 46 ರನ್ ಬಾರಿಸಿ ಕೊನೆಯವರಾಗಿ ಹರ್ಷಲ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು.
ನಂತರ ಆಟಗಾರರು ನಿಂತುಕೊಳ್ಳದೇ ಪೆವಿಲಿ ಯನ್ ನತ್ತ ಮುಖ ಮಾಡಿದ್ದು ಕಂಡು ಬಂದಿತು. ಅಂತಿಮವಾಗಿ 20 ಒವರ್ ಗಳಲ್ಲಿ 242 ಗುರಿ ನೀಡಿದರು.
ಸುದ್ದಿ ಸಂತೆ ನ್ಯೂಸ್ ಧರ್ಮಶಾಲಾ…..