ಮಕ್ಕಳನ್ನು ಬರಮಾಡಿಕೊಳ್ಳಲು ಸಿದ್ದತೆ DDPI ಮತ್ತು BEO ಅವರಿಂದಲೇ ಸ್ವಚ್ಚತೆ ರಾಜ್ಯಾ ದ್ಯಂತ ಶಾಲೆಯಲ್ಲಿ ಸ್ವಚ್ಚತಾ ಕಾರ್ಯ ಹೇಗಿದೆ ನೋಡಿ ನಮ್ಮ ಸರ್ಕಾರಿ ಶಾಲಾ ಶಿಕ್ಷಕರು ಅಧಿಕಾರಿ ಗಳು ಎಲ್ಲದಕ್ಕೂ ಸೈ…..

Suddi Sante Desk

ಧಾರವಾಡ –

ಮೇ 16 ಅಂದರೆ ನಾಳೆ ಯಿಂದ ರಾಜ್ಯಾದ್ಯಂತ ಶಾಲೆ ಗಳು ಆರಂಭವಾಗಲಿದ್ದು ನಾಳೆ ಪ್ರಾರಂಭವಾಗಲಿರುವ 2022 23 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಸಿದ್ದತೆಗಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ಯಾರಕೊಪ್ಪದಲ್ಲಿ ಬಿಇಓ ಮತ್ತು ಡಿಡಿಪಿಐ ಮತ್ತು ಶಾಲಾ ಶಿಕ್ಷಕರು ಶಿಕ್ಷಣ ಪ್ರೇಮಿಗಳು ಶಾಲೆಯಲ್ಲಿ ಸಿದ್ದತೆ ಕಾರ್ಯ ಮಾಡಿದರು ಅಲ್ಲದೇ ಸಾಮೂಹಿಕವಾಗಿ ಸ್ವಚ್ಚತಾ ಕಾರ್ಯ ಮಾಡಿದರು

ಧಾರವಾಡದಲ್ಲಿ ತಾಲೂಕ ಮಟ್ಟದ ಶಾಲಾ ಸ್ವಚ್ಛತಾ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಲಾಗಿತ್ತು.ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ DDPI ರಾದ S.S.ಕೆಳದಿಮಠ ಧಾರವಾಡ ಗ್ರಾಮೀಣ ಶಹರ BEO ರವರಾದ ಉಮೇಶ ಬಮ್ಮಕ್ಕನವರ ಗಿರೀಶ ಪದಕಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಿವಾನಂದ ಬೇಲೂರ,SDMC ಅಧ್ಯಕ್ಷರಾದ ಮೌಲಾಸಾಬ ಹೊರಓಣಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರು ತಿಗಡಿ ಪ್ರಧಾನ ಕಾರ್ಯದರ್ಶಿ,ಶಂಕರಪ್ಪ ಘಟ್ಟಿ SDMC ಸದಸ್ಯ ಚನಬಸಪ್ಪ ಕಲಕಣ್ಣಿ ಕ್ಯಾರಕೊಪ್ಪ ಕನ್ನಡ,ಉರ್ದು ಶಾಲಾ ಶಿಕ್ಷಕರ ವೃಂದ,ಅಡುಗೆ ಸಿಬ್ಬಂದಿ ವರ್ಗದವರು ಭಾಗವಹಿಸಿ ಶ್ರಮದಾನ ಮಾಡಿ ಶಾಲಾ ಆವರಣದಲ್ಲಿರುವ ಕಸ ಕಡ್ಡಿ ತೆಗೆದು,ಕಸ ಗೂಡಿಸಿ ಸ್ವಚ್ಛ ಗೊಳಿಸಿದರು.

ಇದರೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಗುರು ತಿಗಡಿ ಕಾರ್ಯಕ್ರಮ ಸಂಘಟಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.