ಧಾರವಾಡ –
ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆ ದಿದೆ.ನಗರದ ಕುಮಾರೇಶ್ವರ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದ್ದು ರೇಖಾ ಪುಂಡಲೀಕ ಜಗದಾಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾಳೆ
ಕುಮಾರೇಶ್ವರನಗರದ ಬನಶಂಕರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ಇವರ ಪತಿ ಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ಯೊಂದನ್ನು ನಡೆಸುತ್ತಿದ್ದರು ಕಳೆದ ಮೂರು ನಾಲ್ಕು ವರುಷಗಳಿಂದ ಧಾರವಾಡದಲ್ಲಿ ನೆಲೆಸಿದ್ದರು 29 ವಯಸ್ಸಿನ ರೇಖಾ ಕೋಂ ಪುಂಡಲಿಕ ಜಗದಾಳೆ ಅವರು ಅನಾರೋಗ್ಯದಿಂದ ಬೆಸತ್ತು ನೇಣು ಹಾಕಿ ಕೊಂಡು ಮೃತಪಟ್ಟಿದ್ದು ಈ ಒಂದು ಕುರಿತು ಉಪ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ