ಹುಬ್ಬಳ್ಳಿ –
54 ವರ್ಷಗಳ ನಂತರ ನವೀಕರಣಗೊಂಡು ಮತ್ತಷ್ಟು ಸೇವೆಗೆ ಸಿದ್ದಗೊಂಡ Mishra Pedha – ಸಂಜಯ ಮಿಶ್ರಾ ಮಾಲಿಕತ್ವದಲ್ಲಿ ವಿಶಾಲವಾಗಿ ಬೆಳೆಯುತ್ತಿದೆ ಕೆಫೆ ಮಿಶ್ರಾ…..
ಗುಣಮಟ್ಟದ ಸೇವೆ ಗುಣಮಟ್ಟದ ಆಹಾರ ಒಳ್ಳೇಯ ರುಚಿಯೊಂದಿಗೆ ಧಾರವಾಡದಿಂದ ದೆಹಲಿಯವರೆಗೆ ಫೇಮಸ್ ಆಗಿರುವ ಮಿಶ್ರಾ ಪೇಢಾ ಸಂಸ್ಥೆ ವಿಶಾಲ ವಾಗಿ ಬೆಳೆಯುತ್ತಿದೆ.ಸಂಜಯ ಮಿಶ್ರಾ ಮಾಲೀಕತ್ವದ ಈ ಒಂದು ಸಂಸ್ಥೆ ಈಗಾಗಲೇ ಹೆಸರನ್ನು ಮಾಡಿ ಸಾಕಷ್ಟು ಪ್ರಮಾಣದಲ್ಲಿ ವಿಶಾಲವಾಗಿ ಬೆಳೆದಿದ್ದು ಸಧ್ಯ ಮತ್ತಷ್ಟು ತನ್ನ ಸಾಮ್ರಾಜ್ಯವನ್ನು ವಿಸ್ತರಣೆಯನ್ನು ಮಾಡುತ್ತಿದ್ದು ಇದಕ್ಕೆ ಸಾಕ್ಷಿಯಾಗಿ ದೇಶದ ಮೂಲೆ ಮೂಲೆಗಳಲ್ಲಿ ಆರಂಭವಾಗುತ್ತಿವೆ.
ಗ್ರಾಹಕರಿಗೆ ಶುಚಿ ರುಚಿಯೊಂದಿಗೆ ಉತ್ತಮವಾದ ಸೇವೆಯನ್ನು ಒದಗಿಸುತ್ತಾ ಬಂದಿರುವ ಈ ಒಂದು ಮಿಶ್ರಾ ಪೇಢಾ ಸಂಸ್ಥೆ ದಿನಕ್ಕೊಂದು ಮಳಿಗೆಯನ್ನು ಆರಂಭ ಮಾಡುತ್ತಿದೆ.ಇನ್ನೂ ಇದು ಒಂದೆಡೆಯಾದರೆ ಇನ್ನು 54 ವರ್ಷಗಳ ಹಿಂದೆ ಆರಂಭಗೊಂಡು ಈಗಲೂ ಕೂಡಾ ಉತ್ತಮವಾದ ಸೇವೆಯನ್ನು ನೀಡುತ್ತಿರುವ ಹುಬ್ಬಳ್ಳಿಯ ಸಿಬಿಟಿ ಯಲ್ಲಿನ ಮಳಿಗೆಯೊಂದು ಸಂಪೂರ್ಣವಾಗಿ ನವೀಕರಣ ಗೊಂಡು ಹೊಸತನದೊಂ ದಿಗೆ ಮತ್ತಷ್ಟು ಸೇವೆಗ ಳೊಂದಿಗೆ ಸಿದ್ದಗೊಂಡಿದೆ.
ಸಂಜಯ ಮಿಶ್ರಾ ಮಾಲೀಕತ್ವದ ಈ ಒಂದು ಮಳಿಗೆ ಯನ್ನು ಸಧ್ಯ ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಲಾಗಿದ್ದು ಸಂಪೂರ್ಣವಾಗಿ ಹೈಟೇಕ್ ಆಗಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದ್ದು ಈ ಹಿಂದೆ ಇದ್ದ ಸೇವೆಗಳೊಂದಿಗೆ ಸಧ್ಯ ಹೊಟೇಲ್ ಕೂಡಾ ಹೊಸದಾಗಿ ಇಲ್ಲಿ ಆರಂಭ ಮಾಡಲಾಗಿದ್ದು ಇದರೊಂದಿಗೆ ಗ್ರಾಹಕರಿಗೆ ಮತ್ತಷ್ಟು ಹೊಸ ಹೊಸ ತಿಂಡಿ ತಿನಿಸುಗಳ ಸವಿರುಚಿಯ ಸರ್ವಿಸ್ ನೊಂದಿಗೆ ಹೊಸದಾಗಿ ಕೆಫೆ ಮಿಶ್ರಾ ತೆರೆದುಕೊಳ್ಳುತ್ತಿದೆ
ಹೊಸದಾಗಿ ನವೀಕರಣದೊಂದಿಗೆ ಕಾರ್ಯಾವನ್ನು ಮಾಡುತ್ತಿರುವ ಈ ಒಂದು ಮಿಶ್ರಾ ಕೆಫೆಯಲ್ಲಿ ಹತ್ತು ಹಲವಾರು ಹೊಸ ಹೊಸ ಸೇವೆಗಳು ಸಿಗಲಿವೆ ಬನ್ನಿ ಸವಿರುಚಿ ಸವಿಯಿರಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..