ದಾವಣಗೆರೆ –
ಸಿಎಂ ಬದಲಾವಣೆ ಬಗ್ಗೆ ಯತ್ನಾಳ ಹೇಳಿಕೆ ವಿಚಾರ ಕುರಿತು ಯತ್ನಾಳ ಹೇಳಿಕೆಗೆ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಅಂತ ಹೇಳ್ತಿಯಲ್ಲ ತಾಕತ್ ಇದ್ರೆ ಮಾಡು ಎಂದು ಸವಾಲು ಹಾಕಿದರು.

ಯಡಿಯೂರಪ್ಪ MTR ಫುಡ್ ಅಲ್ಲ.ಪಕ್ಷ ವನ್ನು ತಳಮಟ್ಟದಿಂದ ಅಧಿಕಾರಕ್ಕೆ ತಂದವರು BSY ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದ್ದು ಮುಖ್ಯಮಂತ್ರಿ ಮಾಡಿದ್ದು, ಮೋದಿ, ಅಮಿತ್ ಶಾ. ನೀನಾ ಯತ್ನಾಳ್ ಎಂದು ಪ್ರಶ್ನಿಸಿದರು.ಅಲ್ಲದೇ ಯಡಿಯೂರಪ್ಪ ನವರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ನಿನಗಿಲ್ಲ ಎಂದರು.
ಯತ್ನಾಳ್ ನೀನು ಭ್ರಷ್ಟಾ, ನಿನ್ನ ಮಗನನ್ನು ಮುಂದೆ ಇಟ್ಟುಕೊಂಡು ರಾಜಕೀಯ ಮಾಡ್ತಿಯಾ.ನೀನು ನಿನ್ನ ಹೆಂಡತಿ ಮಕ್ಕಳನ್ನು ಹೊರಗೆ ಕಳ್ಸು ಅಮೇಲೆ ಮಾತಾಡು.ನೀನು ವರ್ಜಿನಲ್ ಬಿಜೆಪಿಯಲ್ಲ. ನಿನ್ನನ್ನು ಪಕ್ಷ ಉಚ್ಚಾಟನೆ ಮಾಡಿದಾಗ ಪಕ್ಷಕ್ಕೆ ಕರೆ ತಂದಿದ್ದು ಯಡಿಯೂರಪ್ಪ ಸಂಪೂರ್ಣ ಅವಧಿ ಪೂರೈಸುತ್ತಾರೆ ಎಂದರು.

ನೀನು ಕಾಂಗ್ರೆಸ್ ಏಜೆಂಟ್ ಆಗಿ ವರ್ತನೆ ಮಾಡತೀಯಾ ಯತ್ನಾಳ್ ಗೆ ಮಾನಸಿಕ ಸ್ಥಿತಿ ಸರಿ ಇಲ್ಲ ತಾಕತ್ ಇದ್ದರೆ ಈಗ ರಾಜಿನಾಮೆ ನೀಡಿ ಮತ್ತೆ ವಿಜಯಪುರದಿಂದ ಗೆದ್ದು ಬಾ ಅಮೇಲೆ ಮಾತಾಡು ನಾಳೆ ಸೋಮವಾರ ವಿಧಾನಸಭೆಯ ಪಡಸಾಲೆ ಯಲ್ಲಿ ಶಾಸಕರು ಸಭೆ ಸೇರಿ ನಿನಗೆ ಸರಿಯಾದ ಉತ್ತರ ಕೊಡ್ತಿವಿ ಎಂದರು.