ಹುಬ್ಬಳ್ಳಿ –
ಕೋವಿಡ್ 19 ಸಾಂಕ್ರಾಮಿಕ ರೋಗವು ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ವ್ಯತ್ಯಯವಾಗಿದ್ದು ಶಿಕ್ಷಕರು ನಿರಂತರ ಶಾಲೆಗೆ ತೆರಳಿ ಇಲಾಖೆ ಸೂಚಿಸಿ ರುವ ವಿವಿಧ ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳಿಗೆ ಬೋಧನೆ ಮಾಡಿರುತ್ತೇವೆ. ನಿರ್ದಿಷ್ಟ ಪಡಿಸಿದ ಪಠ್ಯವನ್ನು ಪೂರ್ಣಗೊಳಿಸಿ ರುತ್ತೇವೆ.ಈಗ ಬಿಸಿಲಿನ ತೀವ್ರತೆ ಹಾಗೂ ಕೋವಿಡ್ 19 ಎರಡನೇ ಅಲೆಯ ಪ್ರಭಾವದಿಂದ ಹಾಗೂ ಹಾಜರಾತಿ ಕಡ್ಡಾಯವಲ್ಲ ಎಂಬ ಆದೇಶದ ಹಿನ್ನೆಲೆ ಯಲ್ಲಿ ಮಕ್ಕಳು ತರಗತಿಗೆ ಹಾಜರಾಗುತ್ತಿಲ್ಲ ಅದರ ಲ್ಲೂ ವಿಶೇಷವಾಗಿ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಷ್ಣಾಂಶ 40° ಕ್ಕಿಂತ ಹೆಚ್ಚು ಇದ್ದು ಕಡ್ಡಾಯ ಮಾಸ್ಕ ಧರಿಸಿ ತರಗತಿಗೆ ಹಾಜರಾಗುವುದು ತುಂಬಾ ತೊಂದರೆಯಾಗುತ್ತಿದೆ.

ಮಕ್ಕಳು ಶುದ್ಧ ಗಾಳಿ ಬೆಳಕಿನಲ್ಲಿ ಅನುಕೂಲಕರ ತಾಪಮಾನದಲ್ಲಿ ಮಾತ್ರ ಆಸಕ್ತಿಯಿಂದ ಕಲಿಕಾ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯ ಎಂಬ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಪ್ರತಿ ಶೈಕ್ಷಣಿಕ ವರ್ಷದ ಏಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆ ರಜೆ ನೀಡುತ್ತಾ ಬಂದಿದ್ದು ದಯವಿಟ್ಟು ಮೇಲಿನ ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ಪರೀಕ್ಷೆ ನಡೆಸಲು ಹಾಗೂ ಫಲಿತಾಂಶ ಘೋಷಿಸಲು ಬೇಸಿಗೆ ರಜೆ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಜಿ ಮುಖ್ಯಮಂತ್ರಿ ಗಳಾದ ಜಗದೀಶ.ಶೆಟ್ಟರ ರವರಿಗೆ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಯವರಿಗೆ ವಿಧಾನ ಪರಿಷತ್ ಸದಸ್ಯರು ಗಳಾದ ಪುಟ್ಟಣ್ಣ ಎಸ್.ವಿ.ಸಂಕನೂರ. ಅರುಣ ಶಹಾಪುರ ಶಶಿಲ ನಮೋಶಿ ಇವರುಗಳಿಗೆ ಪತ್ರ ಮುಖೇನ ಸಮಸ್ತ ಶಿಕ್ಷಕರು ವಿದ್ಯಾರ್ಥಿಗಳ ಪರವಾಗಿ ರಾಜ್ಯಾಧ್ಯಕ್ಷರಾದ ಅಶೋಕ ಎಮ್.ಸಜ್ಜನ .ಪವಾಡೆಪ್ಪ ಕಾಂಬಳೆ. ರಾಜ್ಯ ಪ್ರ.ಕಾ.ಮಲ್ಲಿಕಾರ್ಜುನ.ಸಿ.ಉಪ್ಪಿನ. ಭೀಮಾಶಂಕರ ಬಡಿಗೇರ ಗೌರವಾಧ್ಯಕ್ಷರಾದ ಎಲ್.ಆಯ್.ಲಕ್ಕಮ್ಮನವರ ಬಸವರಾಜ ಟಿ ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ ಕೆ.ಬಿ.ಕುರಹಟ್ಟಿ ಕೋಶಾಧ್ಯಕ್ಷರಾದ ಎಸ್.ಎಫ್.ಪಾಟೀಲ ರವಿ ಕುಮಾರ ಬಡಿಗೇರ ರುದ್ರಪ್ಪ ಕುರ್ಲಿ ಸುನಿಲ ಗೌಡ್ರ ಬಸವರಾಜ.ಹೊನ್ನಳ್ಳಿ.ಸಿದ್ದಣ್ಣ ಉಕ್ಕಲಿ. ವಸಂತ ರಾಠೋಡ.ಸುರೇಶ ಅರಳಿ. ಎಮ್.ಆಯ್. ಮುನವಳ್ಳಿ ಗೋವಿಂದ ಜುಜಾರೆ ಮಹ್ಮದರಫಿ ಹನುಮಂತಪ್ಪ ಮೇಟಿ ರಾಮಪ್ಪ ಹಂಡಿ ನಾಗರಾಜು ಕೆ.ಮುಂತಾದವರು ಒತ್ತಾಯಿಸಿದ್ದಾರೆ