ಕರ್ತವ್ಯ ನಿರತ ಸರಕಾರಿ ನೌಕರರಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ಹಾಗೂ ಚಿಕಿತ್ಸೆಗೆ ಶೇ.10 ರಷ್ಟು ಬೆಡ್‍ಗಳನ್ನು ಮೀಸಲಿಡಲು ಮನವಿ…..

Suddi Sante Desk

ಧಾರವಾಡ –

ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ಯನ್ನು ಆಧ್ಯತೆ ಮೇಲೆ ನೀಡಬೇಕೆಂದು ಮತ್ತು ಕರ್ತ ವ್ಯನಿರತರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಶೇ.10ರಷ್ಟು ಬೆಡ್‍ಗಳನ್ನು ಮೀಸಲಿಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್. ಎಫ್. ಸಿದ್ಧನಗೌ ಡರ ಆಗ್ರಹಿಸಿದ್ದಾರೆ.

ಧಾರವಾಡದಲ್ಲಿ ಸಂಘದ ಪದಾರಿಕಾರಿಗಳೊಂದಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕರ್ತವ್ಯ ನಿರ್ವಹಿಸುತ್ತಿರುವ ಸಂಧರ್ಭದಲ್ಲಿ ಕೋವಿ ಡ್-19 ರೋಗವು ತಗಲುವ ಸಂಭವಿದ್ದು ಅವರಿಂದ ಕುಟುಂಬದವರಿಗೂ ರೋಗ ಹರಡುವ ಸಂಭವವಿ ರುತ್ತದೆ.ಕಾರಣ ಅಗತ್ಯ ಸೇವೆಗಳಡಿ ಕರ್ತವ್ಯ ನಿರ್ವ ಹಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೆ ನೌಕರರಿಗೆ ನಿಗ ದಿತ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‌ ಗಳಲ್ಲಿ ಶೇ.10 ರಷ್ಟು ಬೆಡ್‍ಗಳನ್ನು ಪ್ರಥಮ ಆಧ್ಯತೆಯಾಗಿ ಮೀಸಲಿಟ್ಟು ಸೂಕ್ತ ಆರೋ ಗ್ಯ ಚಿಕಿತ್ಸೆ ಒದಗಿಸಲು ಒತ್ತಾಯ ಮಾಡಿದರು

ಕೋವಿಡ್ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸು ತ್ತಿರುವ 18 ವರ್ಷ ಮೇಲ್ಪಟ್ಟ ಅಧಿಕಾರಿ, ಸಿಬ್ಬಂದಿಗ ಳಿಗೆ ಪ್ರಥಮ ಆದ್ಯತೆ ಮೇಲೆ ಕೋವಿಡ್ ಲಸಿಕೆಯ ನ್ನು ನೀಡಿ ನಂತರ ಇನ್ನುಳಿದ ನೌಕರರ ಕುಟುಂಬ ವರ್ಗದವರಿಗೆ ಹಂತಹಂತವಾಗಿ ಕೋವಿಡ್ ಲಸಿಕೆ ಯನ್ನು ನೀಡುವಂತೆ ಕರ್ನಾಟಕ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್.ಸಿದ್ಧನಗೌಡರ ವಿನಂತಿಸಿದ್ದಾರೆ.

ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆ ಆಗಿರುವ ಕೃಷಿಇಲಾಖೆ ಅಧಿಕಾರಿ ಹಾಗೂ ನೌಕರರು ರೈತರಿಗೆ ಕೃಷಿ ಪರಿಕರಗಳಾದ ಬೀಜ,ಗೊಬ್ಬರ, ಕೀಟ ನಾಶಕಗಳನ್ನು ಸಕಾಲದಲ್ಲಿ ಪೂರೈಸಲು ಶ್ರಮಿಸುತ್ತಿ ದ್ದಾರೆ.ಸಧ್ಯ ಮುಂಗಾರು ಹಾಂಗಾಮಿನ ಬಿತ್ತನೆ ಬೀಜ ದ ವಿತರಣಾ ಕಾರ್ಯ ನಡೆಯುತ್ತಿದ್ದು ಅಧಿಕಾರಿ ಸಿಬ್ಬಂದಿಗಳು ಜನದಟ್ಟಣೆಯಲ್ಲಿ ಕಾರ್ಯನಿರ್ವಹಿಸ ಬೇಕಾಗಿದ್ದು.ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಕುಟುಂಬದವರಿಗೆ ಲಸಿಕೆಯನ್ನು ಹಾಕಿಸುವುದು ಅಗತ್ಯವಿದೆ.ಕೂಡಲೇ ಆಧ್ಯತೆ ಮೇರೆಗೆ ಕೃಷಿ ಇಲಾಖೆ ಯವರಿಗೆ ಲಸಿಕೆಗಳನ್ನು ಪೂರೈಸಲು ಕ್ರಮಕೈಗೊಳ್ಳು ವಂತೆ ವಿನಂತಿಸುತ್ತೇವೆ.ಬದ್ದತೆ ಯಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವುದರಿಂದ 45 ವರ್ಷ ದ ಒಳಗಿನ ನೌಕರರಿಗೂ ಲಸಿಕೆಯನ್ನು ನೀಡುವಂತೆ ಅವರು ಮನವಿ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.