ಬೆಂಗಳೂರು –
ಸಂಘದ ಸ್ವಾಭಿಮಾನಿ ನಾಯಕರೇ ಉತ್ತರಿಸಿರಿ
ಪ್ರಾಥಮಿಕ ಶಾಲಾ ಶಿಕ್ಷಕರ,ನೌಕರರ ಸಂಘದ ನಿರ್ಲಕ್ಷ್ಯ ದಿಂದ ಅನ್ಯಾಯಕ್ಕೊಳಗಾದ PST ಶಿಕ್ಷಕರು ಹೌದು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಿಗೆ TGT ಶಿಕ್ಷಕರನ್ನು ನೇರ ನೇಮಕ ಮಾಡಿಕೊಳ್ಳಲಾಯಿತು.
ಆಗ B.Sc B. Ed, ತರಬೇತಿ ಹೊಂದಿದ ಸೇವಾ ನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ TGT ವೃಂದಕ್ಕೆ ಮುಂಬಡ್ತಿ ನೀಡಬೇಕಾಗಿತ್ತು.ಮುಂಬಡ್ತಿ ನೀಡದೇ ಇರುವುದಕ್ಕೆಇದಕ್ಕೆ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ನಿರ್ಲಕ್ಷ್ಯ ಅಲ್ಲವೇ.
2001 ರ ನಂತರದಲ್ಲಿ ಹಿರಿಯ ತರಗತಿಗಳಿಗೆ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳ ಲಾಗಿತ್ತು.2017 ರಲ್ಲಿ ಅವರ ಅರ್ಹತೆಯನ್ನು ಕಸಿದು PST (1-5ನೇ ತರಗತಿ) ಶಿಕ್ಷಕ ಎಂದು ಸೀಮಿತಗೊಳಿಸಲಾಯಿತು.ಇದಕ್ಕೆ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರ,ನೌಕರರ ಸಂಘಧ ನಿರ್ಲಕ್ಷ್ಯ ಅಲ್ಲವೇ.
ಹಿಂದಿ ವಿಷಯ ಆರಂಭವಾಗುವುದೇ 6 ನೇ ವರ್ಗದಿಂದ, 6-8ನೇ ತರಗತಿಗಳಿಗೆ ಬೋಧನೆ ಮಾಡಬೇಕಾದ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರನ್ನು PST 1-5 ಎಂದು C&R ನಲ್ಲಿ ಪದನಾಮ ಮಾಡಿದ್ದು ವಿಚಿತ್ರವಲ್ಲವೇ ಇದಕ್ಕೆ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ನಿರ್ಲಕ್ಷ್ಯ ಅಲ್ಲವೇ.
ಅಧಿಕೃತವಾಗಿ ನಿಯಮಗಳನ್ವಯ ನೇಮಕ ಹೊಂದಿದ ವೃಂದದಲ್ಲಿನ ತರಗತಿಗಳಿಗೆ 20-25 ವರ್ಷಗಳಿಂದ ಬೋಧಿಸುತ್ತಿದ್ದವರನ್ನು ಅನರ್ಹ ರೆಂದು ಕೆಳಗಿನ ತರಗತಿಗಳಿಗೆ ಸೀಮಿತಗೊಳಿಸಿ, ಅದೇ ತರಗತಿಗಳಿಗೆ ಮತ್ತೊಬ್ಬ ಶಿಕ್ಷಕರನ್ನು ನೇಮಕ ಮಾಡಲಾಯಿತು.
ಇದಕ್ಕೆ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ನಿರ್ಲಕ್ಷ್ಯ ಅಲ್ಲವೇ.ಹೊಸ ವೃಂದದ ಸೃಷ್ಟಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು PST (1-5) ಎಂದು ಹೊಸ ವೃಂದ ಬಲವನ್ನು ಪೂರ್ವಾನ್ವಯಗೊಳಿಸಿದ್ದರಿಂದ ಹೆಚ್ಚುವರಿ ಸಮಸ್ಯೆ ಉದ್ಭವವಾಯ್ತು.
ಇದಕ್ಕೆ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ನಿರ್ಲಕ್ಷ್ಯ ಅಲ್ಲವೇ.6-8ನೇ ತರಗತಿ ಕ್ಕೆ PST ಶಿಕ್ಷಕರ ವರ್ಗಾವಣೆಯನ್ನು ನಿರ್ಬಂಧಿಸಿದ್ದರಿಂದ ಹಲವು ವರ್ಷಗಳಿಂದ ವರ್ಗಾವಣೆಗಾಗಿ ಕಾಯುತ್ತಿರುವ ಶಿಕ್ಷಕರಿಗೆ ಖಾಲಿ ಹುದ್ದೆ ಸಿಗದೇ ಹೋಯ್ತು.
ಇದಕ್ಕೆ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರ/ನೌಕರರ ಸಂಘದ ನಿರ್ಲಕ್ಷ್ಯ ಅಲ್ಲವೇ. RTE NCTE ನಿಯಮಗಳನ್ವಯ ಒಂದು ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ವಿದ್ಯಾರ್ಹತೆ ಹೊಂದಿಲ್ಲದಿದ್ದರೆ ಅಂತಹ ಶಿಕ್ಷಕರಿಗೆ ವಿದ್ಯಾರ್ಹತೆ ಗಳಿಸಲು ಅವಕಾಶ ನೀಡಬೇಕು ಎಂದಿರುವಾಗ.. ಅದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ
ಅದನ್ನೂ ಮೀರಿ ಈಗಾಗಲೇ ಅರ್ಹತೆ ಹೊಂದಿ ರುವ ಸೇವಾನಿರತ ಪದವೀಧರ ಶಿಕ್ಷಕರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ, ಇವರನ್ನು GPT ಎಂದು ಪರಿಗಣಿಸದೇ PST 1-5 ಎಂದು ಕೆಳಗಿನ ತರಗತಿಗೆ ಸೀಮಿತಗೊಳಿಸಿರುವುದು ನ್ಯಾಯ ಬಾಹಿರವಾಗುವುದಿಲ್ಲವೇ.
GPT (6-8ನೇ ತರಗತಿ) ಶಿಕ್ಷಕರು ಬಂದರೆಂಬ ಕಾರಣ ನೀಡಿ, 20-25 ವರ್ಷಗಳಿಂದ 6-7/8 ನೇ ತರಗತಿಗಳಿಗೆ ಬೋಧಿಸುತ್ತಿದ್ದ ಶಿಕ್ಷಕರಿಗೆ ನೀವು PST (1-5ನೇತರಗತಿ) ಶಿಕ್ಷಕರು 6-8 ಕ್ಕೆ ನಿಮಗೆ ಅರ್ಹತೆ ಇಲ್ಲ ಹೋಗಿ ನಲಿ-ಕಲಿಗೆ ಎಂದಾಗ ಆದಂತಹ ನೋವು ಅವಮಾನದಿಂದ ಎಷ್ಟೋ ಶಿಕ್ಷಕರು ಕುಗ್ಗಿ ಹೋಗಿದ್ದಾರೆ.
ಸತತ ಒಂದೇ ಹುದ್ದೆಯಲ್ಲಿ ನಿರಂತರ ಸೇವೆ ಸಲ್ಲಿಸಿದವರಿಗೆ ಮುಂಬಡ್ತಿ ನೀಡಬೇಕೆನ್ನುವುದು ನಿಯಮ. ಆದರೆ 2016 ಕ್ಕಿಂತ ಮುಂಚೆ 1-7/8 ಕ್ಕೆ ನೇಮಕಗೊಂಡ ಅಂದಾಜು 80 ಸಾವಿರ ಅಧಿಕ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಕರ್ತವ್ಯ ದಲ್ಲಿದ್ದಾಗ್ಯೂ ಇವರನ್ನು GPT ಎಂದು ಪರಿಗಣಿ ಸದೇ 2017ರಲ್ಲಿ PST (1-5ನೇ ತರಗತಿ )ಎಂದು ಪದನಾಮಿಕರಣ ಮಾಡಿ ಕೆಳಗಿನ ತರಗತಿಗಳಿಗೆ ಸೀಮಿತಗೊಳಿಸಿದ್ದು ಐತಿಹಾಸಿಕ ಪ್ರಮಾದವಾಯಿತೇ
PST ಶಿಕ್ಷಕರನ್ನು GPT ಶಿಕ್ಷಕರ ವೃಂದಕ್ಕೆ ವಿಲೀನ ಮಾಡಲು RTE & NCTE ನಿಯಮಗಳ ಪ್ರಕಾರ ಸಾಧ್ಯವಿದೆ.ಇದಕ್ಕೆ ಕಾರಣ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ನಿರ್ಲಕ್ಷ್ಯ ಅಲ್ಲವೇ. ಪ್ರೌಢಶಾಲೆಗಳಿಗೆ ಬಡ್ತಿ ಸಿಗುವ ಕನಸಿನೊಂದಿಗೆ ಲಕ್ಷಾಂತರ ಹಣ ಖರ್ಚು ಮಾಡಿ ಬಿ.ಎಡ್ ತರಬೇತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರ -2 ವೃಂದಕ್ಕೆ ನೀಡುವ ಮುಂಬಡ್ತಿ ನಿಂತು ಹೋಯಿತು.
ಹೀಗೆ ಅನ್ಯಾಯಗಳ ಸರಮಾಲೆ ಪಟ್ಟಿಯನ್ನು whatsApp ನಲ್ಲಿ ಬರೆಯಲು ಸಾಲುವುದಿಲ್ಲ. ಹಾಗಾದರೆ ಈ ಅನ್ಯಾಯಗಳನ್ನು ಪ್ರಶ್ನಿಸಲು ಯಾರಿಗೂ ಧ್ವನಿ ಇಲ್ಲವೇ.ನ್ಯಾಯ ಲಭಿಸುವ ಭರವಸೆಯ ಮುನ್ನೋಟದೊಂದಿಗೆ ಕಾಯು ತ್ತಿರುವ ಸ್ವಾಭಿಮಾನಿ ಸೇವಾನಿರತ ಪದವೀಧರ PST ಶಿಕ್ಷಕರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..