ಹುಬ್ಬಳ್ಳಿ –
ಸಾರ್ವಜನಿಕರ ಒಂದೇ ಒಂದು ಪೊನ್ ಕರೆಗೆ ಸ್ಪಂದಿಸಿದ ಶಾಸಕ ಪ್ರಸಾದ್ ಅಬ್ಬಯ್ಯ – ಶಾಸಕರ ಗಮನಕ್ಕೆ ತಗೆದುಕೊಂಡು ಬಂದು ಕೆಲವೇ ನಿಮಿಷಗಳಲ್ಲಿ ದೊಡ್ಡ ಸಮಸ್ಯೆಯನ್ನು ಪರಿಹಾರ ಮಾಡಿ ಪೊಟೊ ಶೇರ್ ಮಾಡಿದ ಆಪ್ತ ಸಹಾಯಕ ರಾಜು ಹಾದಿಮನಿ
ಸಾರ್ವಜನಿಕರು ಯಾವುದೇ ಸಮಸ್ಯೆ ಯಾವುದೇ ತೊಂದರೆಯನ್ನು ಗಮನಕ್ಕೆ ತಗೆದುಕೊಂಡು ಬಂದರು ಅದನ್ನು ಪರಿಹಾರ ಮಾಡೊದು ಜನಪ್ರತಿನಿಧಿಗಳಿಗೆ ದೊಡ್ಡ ಜವಾಬ್ದಾರಿ,.ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಜನಪ್ರತಿನಿಧಿಗಳು ಕೆಲವೊಮ್ಮೆ ಸಾರ್ವಜನಿಕರು ಹೇಳಿದ ಸಮಸ್ಯೆಯನ್ನು ಮರೆಯುತ್ತಾರೆ ಇಂತಹ ಪರಸ್ಥಿತಿಯ ನಡುವೆ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಸಾರ್ವಜನಿಕರೊಬ್ಬರು ಸಮಸ್ಯೆಯನ್ನು ತಮ್ಮ ಗಮನಕ್ಕೆ ತಗೆದುಕೊಂಡ ಬಂದ ಕೂಡಲೇ ಅದಕ್ಕೆ ಪರಿಹಾರವನ್ನು ಕಲ್ಪಿಸಿದ್ದಾರೆ.
ಹೌದು ಹುಬ್ಬಳ್ಳಿ ಹೊರವಲಯದ ಗಬ್ಬೂರ ಮುಖ್ಯ ರಸ್ಥೆಯಲ್ಲಿನ ಬೀದಿ ದೀಪಗಳು ಕಾರ್ಯವನ್ನು ಮಾಡುತ್ತಿಲ್ಲ ಕತ್ತಲಲ್ಲಿ ನಮಗೆ ಸುತ್ತಾಡೊದು ಸಾಕಷ್ಟು ಸಮಸ್ಯೆಯಾಗುತ್ತದೆ ತೊಂದರೆಯಾಗಿದೆ ಎಂಬ ಸಮಸ್ಯೆ ಶಾಸಕರ ಕಚೇರಿಗೆ ಬಂದಿತು ಕೂಡಲೇ ಕಾರ್ಯಪ್ರವೃತ್ತ ರಾದ ಶಾಸಕರ ಆಪ್ತ ಸಹಾಯಕ ರಾಜು ಹಾದಿಮನಿ ಸಾರ್ವಜನಿಕರ ಸಮಸ್ಯೆಯನ್ನು ಕೂಡಲೇ ಶಾಸಕರ ಗಮನಕ್ಕೆ ತಗೆದುಕೊಂಡು ಬಂದು ಸಂಬಂಧಿಸಿದವರಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದರು.
ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಹತ್ತೆ ಹತ್ತು ನಿಮಿಷಗಳಲ್ಲಿ ದೊಡ್ಡ ಸಮಸ್ಯೆಯನ್ನು ಪರಿಹಾರ ಮಾಡಿ ಸಾರ್ವಜನಿಕರಿಗೆ ಬೆಳಕನ್ನು ನೀಡಿದರು ಅಲ್ಲದೇ ಸಮಸ್ಯೆಯನ್ನು ಹೇಳಿದ ಸಾರ್ವಜನಿಕರಿಗೆ ವಿದ್ಯುತ್ ದೀಪಗಳು ಕಾರ್ಯವನ್ನು ಮಾಡುತ್ತಿರುವ ಪೊಟೊ ವನ್ನು ಕೂಡಾ ಅವರಿಗೆ ರಾಜು ಹಾದಿಮನಿಯವರು ಕಳುಹಿಸಿ ಜವಾಬ್ದಾರಿಯನ್ನು ತೋರಿಸಿಕೊಟ್ಟರು.
ಜನಪ್ರತಿನಿಧಿಗಳ ಆಪ್ತ ಸಹಾಯಕರು ಹೇಗೆ ಇರಬೇಕು ಜವಾಬ್ದಾರಿ ಏನು ಎಂಬೊದನ್ನು ರಾಜು ಹಾದಿಮನಿ ಯವರು ಈ ಒಂದು ಕೆಲಸದ ಮೂಲಕ ತೋರಿಸಿ ಕೊಟ್ಟಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……