ಚಿಕ್ಕಮಗಳೂರು –
ಮನೆಯ ಮಂದಿಗೆಲ್ಲ ಕರೋನಾ ಸೊಂಕು ಹರಡು ತ್ತದೆ ಇಡೀ ಕುಟುಂಬವೇ ಇಲ್ಲದಂತಾಗುತ್ತದೆ ಹೀಗೆ ಎಂದುಕೊಂಡು ಉಪ ತಹಶೀಲ್ದಾರ್ ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕ ಮಗಳೂರಿ ನಲ್ಲಿ ನಡೆದಿದೆ.ಹೌದು ಕೊರೋನಾ ಮನೆಯವರಿಗೆ ಹರಡುತ್ತೆಂದು ನಿವೃತ್ತ ಉಪ ತಹಶೀಲ್ದಾರ್ ಆತ್ಮ ಹತ್ಯೆಗೆ ಶರಣಾಗಿದ್ದಾರೆ

ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ತಮ್ಮ ಬಳಿ ಇದ್ದ ಗನ್ ನಿಂದ ಶೂಟ್ ಮಾಡಿಕೊಂಡು ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡ್ಯದಲ್ಲಿ ಈ ಒಂದು ಘಟನೆ ನಡೆದಿದೆ

ನಿವೃತ್ತ ಉಪ ತಹಸೀಲ್ದಾರ್ ಸೋಮನಾಯ್ಕ್ ಮೃತ ದುರ್ದೈವಿಗಳಾಗಿದ್ದಾರೆ.ಡೆತ್ ನೋಟ್ ಬರೆದಿಟ್ಟು ತೋಟದಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ.ಕಾರಿ ನಲ್ಲಿ ಕುಳಿತು ತಲೆಗೆ ಬಂದೂಕಿನಿಂದ ಶೂಟ್ ಮಾಡಿ ಕೊಂಡಿರುವ ಸೋಮನಾಯ್ಕ್ ಅವರು ಮನೆಮಂ ದಿಗೆಲ್ಲಾ ಕೊರೊನಾ ಹರಡಬಹುದು ಅನ್ನೋ ಭಯ ದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದರು. ಚಿಕ್ಕ ಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿರುವ ಗ್ರಾಮ.