ನಿವೃತ್ತರಾದ ಎಮ್ ಜಿ ಸುಬೇ ದಾರ್ – 30 ವರ್ಷಗಳ ಸಾರ್ಥಕ ಶಿಕ್ಷಕ ವೃತ್ತಿಯಲ್ಲಿ ನಿ ‘ವೃತ್ತಿ’

Suddi Sante Desk

ಧಾರವಾಡ –

ಕಳೆದ 30 ವರುಷಗಳಿಂದ ಸಾರ್ಥಕ ಶಿಕ್ಷಕ ವೃತ್ತಿಯನ್ನು ಮುಗಿಸಿ ಧಾರವಾಡದಲ್ಲಿ ಎಂ ಜಿ ಸುಬೇದಾರ ಶಿಕ್ಷಕರು ನಿವೃತ್ತಿಯಾಗಿದ್ದಾರೆ‌‌.ಜಿಲ್ಲೆಯ ಮೊರಬ ಗ್ರಾಮದವರಾದ ಇವರು ರೈತಾಪಿ ಶ್ರೀಮಂತ ಅವಿಭಕ್ತ ಕುಟುಂಬದವರಾಗಿದ್ದಾರೆ. ತಂದೆಯವರು ಹೈಸ್ಕೂಲ್ ಶಿಕ್ಷಕರಾಗಿದ್ದು ಅವರ ಹಾಗೆ ಸರಳ ಸಜ್ಜನಿಕೆ ಸ್ವಭಾವ. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಗುಣ. ಕ್ರಿಕೆಟ್ ಪ್ರೇಮಿ. ಗರಗ ಮತ್ತು ಹೆಬ್ಬಳ್ಳಿಯಲ್ಲಿ CRP ಯಾಗಿ ಸೇವೆ ಸಲ್ಲಿಸಿದರು.

ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು . ಮಗಳು ಎಂಜಿನಿಯರಿಂಗ್ ಪಾಸ್ ಮಾಡಿದ್ದಾಳೆ, ಮಗ ಇನ್ನು ಕಲಿಯುತ್ತಿದ್ದಾರೆ. ವೃತ್ತಜೀವನದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದವರು. ಕೈ ಕುಲುಕಿ ಮಾತನಾಡಿಸುವ,ಎಲ್ಲರನ್ನು ಪ್ರೀತಿಸುವ ಅವರ ದೊಡ್ಡ ಗುಣ ಯಶಸ್ಸಿಗೆ ಕಾರಣ. ಇಂದು ಅವರು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಅವರ ನಿವೃತ್ತಿ ಬದುಕು ಸುಖಮಯ ಆಗಲಿ , ಅವರಿಗೆ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಭಗವಂತ ನೀಡಲಿ ಎಂದು ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನರ ಮತ್ತು ಸರ್ವ ಸದಸ್ಯರು ಮತ್ತು ಎಲ್ಲಾ ಶಿಕ್ಷಕರ ಬಂಧುಗಳ ಪರವಾಗಿ ಎಲ್ ಐ ಲಕ್ಕಮ್ಮನವರ ಮತ್ತು ಮನದುಂಬಿ ಹಾರೈಸಿದ್ದಾರೆ. ಹಾಗೇ ಅಕ್ಷರತಾಯಿ ದತ್ತಿದಾನಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆ ಧಾರವಾಡ ಇವರಿಂದಲೂ ಶುಭಾಶಯ ಹೇಳಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.