ಹುಬ್ಬಳ್ಳಿ –
ಹೌದು ಮಹಾಮಾರಿ ಕೋವಿಡ್ ಗೆ ಹುಬ್ಬಳ್ಳಿಯಲ್ಲಿ ನಿವೃತ್ತ ಸಬ್ ಇನ್ಸ್ಪೆಕ್ಟರ್ ರೊಬ್ಬರು ಸಾವಿಗೀಡಾಗಿ ದ್ದಾರೆ.ಹುಬ್ಬಳ್ಳಿ ಧಾರವಾಡದ ಬಹುತೇಕ ಎಲ್ಲಾ ಪೊಲೀಸ್ ಠಾಣೆ ಗಳಲ್ಲಿ ದಕ್ಷ ಮತ್ತು ಪ್ರಾಮಾಣಿಕತೆ ಯಿಂದ ಕರ್ತವ್ಯ ನಿರ್ವಹಿಸಿ ಅದರಲ್ಲೂ ಧಾರವಾಡ ದ ಸಂಚಾರಿ ಪೊಲೀಸರ ಠಾಣೆಯಲ್ಲಿ ಹನ್ನೆರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ದ್ದ M R ಮಿಶ್ರೀಕೊಟಿ ಅವರು ನಿಧನರಾಗಿದ್ದಾರೆ. ಕಳೆದ ಹಲವು ದಿನಗಳ ಹಿಂದೆ ಇವರಿಗೆ ಕರೋನ ಸೋಂಕು ಕಾಣಿಸಿಕೊಂಡಿತ್ತು ಆಸ್ಪತ್ರೆಗೆ ದಾಖಲಾಗಿ ದ್ದರು ಚಿಕಿತ್ಸೆ ಫಲಿಸದೇ ಬೈರಿದೇವರಕೊಪ್ಪದಲ್ಲಿ ನಿಧನರಾಗಿದ್ದಾರೆ

ಬೈರಿದೇವರಕೊಪ್ಪ ದಲ್ಲಿ ವಾಸಿಸುತ್ತಿದ್ದರು.ಇಬ್ಬರು ಮಕ್ಕಳು ಪತ್ನಿ ಅಪಾರ ಬಂಧು ಬಳಗ ವನ್ನು ನಿವೃತ್ತ ಪೊಲೀಸ್ ಅಧಿಕಾರಿ ಅಗಲಿದ್ದಾರೆ.ಇನ್ನೂ ಮೃತರ ನಿಧನಕ್ಕೆ ಧಾರವಾಡದ ಸಂಚಾರಿ ಪೊಲೀಸ್ ಠಾಣೆ ಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೇ ಅವಳಿ ನಗರದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ಸಂತಾಪ ಸೂಚಿಸಿದ್ದಾರೆ