ಧಾರವಾಡ –
ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಸಂಚಾರಿ ಪೊಲೀಸರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.

ಧಾರವಾಡದ ಸಂಚಾರಿ ಪೊಲೀಸರಿಂದ ಈ ಒಂದು ಕಾರ್ಯಕ್ರಮ ನಡೆಯಿತು .ಇನ್ನೂ ಯಾವುದೇ ವೇದಿಕೆಯ ಕಾರ್ಯಕ್ರಮವನ್ನು ಮಾಡದೇ ಸಂಚಾರಿ ಪೊಲೀಸರು ರಸ್ತೆ ಸುರಕ್ಷತಾ ಕುರಿತು ಮುಖ್ಯವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ನಗರದ ಮಾರುಕಟ್ಟೆ ಪ್ರದೇಶದಲ್ಲಿ ಮುಖ್ಯವಾಗಿ ಸಾರ್ವಜನಿಕರಿಗೆ ಆಟೋ ಚಾಲಕರಿಗೆ ರಸ್ತೆಯ ನಿಯಮಗಳ ಕುರಿತು ತಿಳಿಸಿಕೊಟ್ಟರು.ಇದೇ ವೇಳೆ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ರಸ್ತೆ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ ಎಂದರು.

ನಗರದ ಮಾರುಕಟ್ಟೆ ತುಂಬೆಲ್ಲಾ ಧಾರವಾಡ ಸಂಚಾರಿ ಪೊಲೀಸರು ಒಂದು ಸುತ್ತು ಹಾಕಿ ಎಲ್ಲರಿಗೂ ಗುಲಾಬಿ ಹೂ ನೀಡಿ ರಸ್ತೆ ನಿಯಮ ಪಾಲಿಸಿ ಸುರಕ್ಷಿತವಾಗಿ ಇರಿ ಎನ್ನುತ್ತಾ ಜಾಗೃತಿ ಮೂಡಿಸಿದರು.

ಇನ್ನೂ ಈ ಒಂದು ಕಾರ್ಯಕ್ರಮವು ಧಾರವಾಡ ಸಂಚಾರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಾರ್ಗದರ್ಶನದಲ್ಲಿ ASI ಅಧಿಕಾರಿಗಳಾದ S H ಕಡಕೋಳ,M S ಕರಿಗನ್ನವರ, ಇನ್ನೂ ಸಿಬ್ಬಂದಿಗಳಾದ ಬಸಯ್ಯ G S ,ಅಲಿ ಹಾಡ್ಕರ್,B K ಲಮಾಣಿ, ಎಲ್ಲರೂ ಆಟೋ ಚಾಲಕರಿಗೆ, ಸಾರ್ವಜನಿಕರಿಗೆ ಮುಖ್ಯವಾಗಿ ರಸ್ತೆ ನಿಯಮಗಳ ಕುರಿತು ತಿಳುವಳಿಕೆ ಅದರಲ್ಲೂ ಹೆಲ್ಮೆಟ್ ಹಾಕುವ ಕುರಿತು ತಿಳಿಹೇಳಿ ಜಾಗೃತಿ ಮಾಡಿದರು